ಮಂಗಳೂರು : ಫೇಸ್ ಬುಕ್ ‘ಫ್ರೆಂಡ್' ಮೋಹದ ಅವಾಂತರ!ಬರೋಬ್ಬರಿ 56 ಲಕ್ಷ ಕಳೆದುಕೊಂಡ ವ್ಯಕ್ತಿ!!

ಮಂಗಳೂರು : ಫೇಸ್ ಬುಕ್ ‘ಫ್ರೆಂಡ್' ಮೋಹದ ಅವಾಂತರ!ಬರೋಬ್ಬರಿ 56 ಲಕ್ಷ ಕಳೆದುಕೊಂಡ ವ್ಯಕ್ತಿ!!


ಮಂಗಳೂರು : ಫೇಸ್ ಬುಕ್ ನಲ್ಲಿ ಸಿಕ್ಕ ‘ಫ್ರೆಂಡ್ ’ನ ಮೋಹಕ್ಕೆ ಬಲಿಯಾದ ಮಂಗಳೂರಿನ ವ್ಯಕ್ತಿಯೋರ್ವರು ಬರೋಬ್ಬರಿ 56 ಲಕ್ಷ ರೂಪಾಯಿ ಕಳೆದುಕೊಂಡಿದ್ದು ಇದೀಗ ಸೈಬರ್ ಕ್ರೈಂ ಪೊಲೀಸ್ ಠಾಣೆ ಕದ ತಟ್ಟಿದ್ದಾರೆ.

ದೂರುದಾರ ವ್ಯಕ್ತಿಯ ಫೇಸ್‌ಬುಕ್ ಅಕೌಂಟ್‌ಗೆ ಜುಲೈ ತಿಂಗಳಿನಲ್ಲಿ ಅದಿತಿ ಕಪೂರ್ ಎಂಬ ಹೆಸರಿನ ಮಹಿಳೆಯೊಬ್ಬರು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರು. ದೂರುದಾರರು ಅದನ್ನು ಅಕ್ಸೆಪ್ಟ್  ಮಾಡಿ ಮೆಸೆಂಜರ್ ಮೂಲಕ ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದರು.  ಕೆಲ ಸಮಯದ ಅನಂತರ ಮಹಿಳೆ ದೂರುದಾರರಿಗೆ ಹೂಡಿಕೆಯ ಪ್ಲಾನ್ ಉಂಟು ಅದರಲ್ಲಿ ನಾನು ಕೂಡ ಹೂಡಿಕೆ ಮಾಡಿದ್ದೇನೆ ನೀವೂ ಹೂಡಿಕೆ ಮಾಡಿ  ಒಳ್ಳೆ ಯ ರಿಟರ್ನ್ಸ್ ಬರುತ್ತೆ ಅಂತ ಸಿಹಿ ಮಾತುಗಳಿಂದ ಆಸೆ ಹುಟ್ಟಿಸಿದ್ದಾರೆ.  ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚು ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದಾಳೆ.  

ಅನಂತರ ಲಿಂಕ್ ಕಳುಹಿಸಿ ರಿಜಿಸ್ಟ್ರೇಷನ್ ಮಾಡಲು ತಿಳಿಸಿದ್ದಾಳೆ. ರಿಜಿಸ್ಟ್ರೇಷನ್ ಮಾಡಿಸಿಕೊಂಡ  ವ್ಯಕ್ತಿ ಬಳಿಕ ಮಹಿಳೆ ಹೇಳಿದಂತೆ ಅದಕ್ಕೆ ಹಣ ವರ್ಗಾವಣೆ ಮಾಡಿದ್ದು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಬರೋಬ್ಬರಿ ಒಟ್ಟು 56,64,000 ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಕೆಲ ಸಮಯದ ಅನಂತರ ಹೂಡಿಕೆ ಮಾಡಿದ ಹಣವನ್ನು ವಾಪಸ್ ಪಡೆಯಲು ಮುಂದಾದಾಗಲೇ ಗೊತ್ತಾದದ್ದು ತಾನು ಮಹಿಳೆಯಿಂದ ವಂಚನೆಗೊಳಗಾಗಿದ್ದೇನೆ ಎಂದು. ಇದೀಗ ವಂಚನೆಗೊಳಗಾದ ವ್ಯಕ್ತಿ ಸೆನ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article