ಗದಗ : ಕೌಟುಂಬಿಕ ಕಲಹ, ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಂದೆ ಆತ್ಮಹತ್ಯೆ!

ಗದಗ : ಕೌಟುಂಬಿಕ ಕಲಹ, ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಂದೆ ಆತ್ಮಹತ್ಯೆ!

ಗದಗ: ಕೌಟುಂಬಿಕ ಕಲಹ ಹಿನ್ನೆಲೆ ಮೂರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ತಾನೂ ನದಿಗೆ ಹಾರಿದ ಘಟನೆ ತಾಲೂಕಿನ ಕೊರ್ಲಹಳ್ಳಿ ಬಳಿ ಮಂಗಳವಾರ ನಡೆದಿದೆ. 

ಮುಂಡರಗಿ ತಾಲೂಕಿನ ಮಕ್ತುಂಪೂರ ಗ್ರಾಮದ ನಿವಾಸಿ ಮಂಜುನಾಥ ಅರಕೇರಿ (38), ಮಕ್ಕಳಾದ ವೇದಾಂತ (3), ಪವನ (4), ಧನ್ಯಾ (6) ಎಂಬ ನದಿಗೆ ಎಸೆದು ತಾನೂ ನದಿಗೆ ಹಾರಿದ್ದಾನೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳು ಹಾಗೂ ಅಳಿಯನ ಮಗ ಸೇರಿ ಮೂವರು ಮಕ್ಕಳನ್ನು ಮಕ್ತುಂಪೂರ ಗ್ರಾಮದಿಂದ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿಗೆ ಆಡ್ಡಲಾಗಿ ಕಟ್ಟಿರುವ ಸೇತುವೆ ಮೇಲಿನಿಂದ ಮಕ್ಕಳನ್ನು ಎಸೆದು ತಾನೂ ನದಿಗೆ ಹಾರಿದ್ದಾನೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಧಾವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರೊಂದಿಗೆ ಹುಟುಕಾಟ
ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article