ಬೆಂಗಳೂರು :ಶಾಲೆಗಳ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ ಫುಡ್ ನಿಷೇಧ, ನಿಯಮ ಉಲ್ಲಂಘಿಸಿದರೆ ಕ್ರಮ: ಸಚಿವ ಯು.ಟಿ.ಖಾದರ್..!!

ಬೆಂಗಳೂರು :ಶಾಲೆಗಳ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ ಫುಡ್ ನಿಷೇಧ, ನಿಯಮ ಉಲ್ಲಂಘಿಸಿದರೆ ಕ್ರಮ: ಸಚಿವ ಯು.ಟಿ.ಖಾದರ್..!!

ಬೆಂಗಳೂರು: "ಶಾಲೆಯಲ್ಲಿ ಮತ್ತು ಶಾಲಾ ಸುತ್ತಮುತ್ತ ಜಂಕ್ ಫುಡ್ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದ ಶಾಲೆಗಳಿಗೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದರು.

ಆರೋಗ್ಯಸೌಧದಲ್ಲಿ ಮಾತನಾಡಿದ ಅವರು, "ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆ. ಸರ್ವೆ ಮಾಡಿದಾಗ ಶಾಲಾ ಕ್ಯಾಂಟೀನ್​ನಲ್ಲೇ ಜಂಕ್ ಫುಡ್ ನೀಡಲಾಗುತ್ತಿದೆ. 12ನೇ ತರಗತಿ ತನಕ ಶಾಲೆಯಲ್ಲಿ‌ ಜಂಕ್ ಫುಡ್ ಬ್ಯಾನ್ ಮಾಡಲಾಗುವುದು. ಈ ನಿಯಮ ಉಲ್ಲಂಘಿಸಿದ ಶಾಲೆಗಳಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಶಿಕ್ಷಣ ಇಲಾಖೆ ಮೂಲಕ ನಿಯಮ ಜಾರಿಗೊಳಿಸಲಾಗುತ್ತದೆ. 50 ಮೀಟರ್​​ ಸುತ್ತಮುತ್ತ ಶಾಲೆಗಳಲ್ಲಿ ಜಂಕ್​​ ಫುಡ್​​ ಮಾರಾಟಕ್ಕೆ ಅವಕಾಶ ಇಲ್ಲ" ಎಂದರು.

"134 ಶಾಲೆಗಳಿಗೆ ಭೇಟಿ ನೀಡಿ ಈ ಆದೇಶ ಹೊರಡಿಸಲಾಗಿದೆ. ಹೈಶುಗರ್​​​, ಹೈಫ್ಯಾಟ್​​​ ಇರಬಾರದು. ಪಾಪ್​ಕಾರ್ನ್​​ ಕೊಡಬಹುದು. ಚಿಕ್ಕಿ ಕೊಡಬಹುದು. ಮೊದಲಿಗೆ ಕಂಟ್ರೋಲ್ ಮಾಡಲಾಗುತ್ತದೆ, ನಂತರ ದಂಡ ಪ್ರಯೋಗ ಮಾಡಲಾಗುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣ ಆರೋಗ್ಯ ಇಲಾಖೆಯ ಮೊದಲ ಆದ್ಯತೆ. ರೋಗ ಬರುವ ಮೊದಲೇ ಕ್ರಮ ಕೈಗೊಳ್ಳಬೇಕು.‌ ಜನಸಾಮಾನ್ಯರಿಗೆ ಹೇಳುವುದೇನೆಂದರೆ ಅವರವರ ಆರೋಗ್ಯ ಅವರವರ ಜವಬ್ದಾರಿ. ನಿಮ್ಮ ಆರೋಗ್ಯ ನೀವು ನೋಡಿಕೊಂಡರೆ ನಮ್ಮ ಕೆಲಸ ಕಡಿಮೆ. ರೋಗ ಬರದ ರೀತಿಯಲ್ಲಿ ನೋಡಿಕೊಳ್ಳಬೇಕು. ಆರೋಗ್ಯವಂತ ಸಮಾಜ ಅತಿಮುಖ್ಯ. ಜಂಕ್ ಫುಡ್ ಮಾರಾಟ ಮಾಡುವುದು ಸರಿಯಲ್ಲ ಎಂಬುದನ್ನು ಅಂಗಡಿ ಮಾಲೀಕರು ಅರ್ಥ ಮಾಡಿಕೊಳ್ಳಬೇಕು. ಪೋಷಕರು ಕೂಡ ಜಾಗೃತಿ ‌ಮೂಡಿಸಬೇಕು" ಎಂದರು.

ಶಾಲೆ ಕಾಲೇಜು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ 50 ಮೀಟರ್ ವ್ಯಾಪ್ತಿಯಲ್ಲಿ ಅಧಿಕ ಕೊಬ್ಬು ಟ್ರಾನ್ಸ್​ಫ್ಯಾಟ್ ಅಧಿಕ ಸಕ್ಕರೆ ಅಧಿಕ ಸೋಡಿಯಂ ಹೊಂದಿರುವ ಆಹಾರ ಪದಾರ್ಥಗಳ ಮಾರಾಟ ನಿಷೇಧಿಸಲಾಗಿದೆ. ಶಾಲಾ ಆವರಣದೊಳಗೆ ಯಾವುದೇ HFSS ಆಹಾರ ಪದಾರ್ಥ ಮಾರಾಟ ಮಾಡದಂತೆ ಎಚ್ಚರಿಕೆ ಫಲಕ ಅಳವಡಿಸಬೇಕು. ಶಾಲಾ ಆವರಣದ 50 ಮೀ. ವ್ಯಾಪ್ತಿಯಲ್ಲಿ ಯಾವುದೇ HFSS (high fat, sugar and salt) ಮಾರಾಟ ಮಾಡದಂತೆ ಕ್ರಮ ಜರುಗಿಸಲಾಗುವುದು. ಆಹಾರ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಪರವಾನಗಿ ರದ್ದು, ಆಹಾರ ವಶಪಡಿಸಿಕೊಳ್ಳುವುದು ಹಾಗೂ ಅಗತ್ಯವಿದ್ದಲ್ಲಿ ನ್ಯಾಯಾಂಗ ಕ್ರಮ ಜರುಗಿಸಲಾಗುವುದು. ಶಾಲಾ ಆಡಳಿತ ಮಂಡಳಿ ಮಕ್ಕಳ ಆರೋಗ್ಯಕರ ಆಹಾರ ಪದ್ಧತಿ ಉತ್ತೇಜಿಸುವುದು ಪೌಷ್ಟಿಕ ಆಹಾರದ ಕುರಿತು ಅರಿವು ಮೂಡಿಸುವುದು. ಈ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ತಿಳಿಸಿದರು.

ಬಿಸಿ ನೀರು ಕಡ್ಡಾಯವಾಗಿ ಕೊಡಬೇಕು: ಮಳೆಗಾಲದಲ್ಲಿ ಎಲ್ಲಾ ಹೋಟೆಲ್, ಕ್ಯಾಂಟೀನ್​ನಲ್ಲಿ ಬಿಸಿ‌ ನೀರು ಕಡ್ಡಾಯವಾಗಿ ಕೊಡಬೇಕು. ದರ್ಶಿನಿ, ಹೋಟೆಲ್​, ರೆಸ್ಟೋರೆಂಟ್​, ಕ್ಯಾಂಟೀನ್​ ಎಲ್ಲರಿಗೂ ಬಿಸಿ ನೀರು ಕೊಡಬೇಕು ಎಂದು ಇದೇ ವೇಳೆ ಸಚಿವರು ಸೂಚಿಸಿದರು.

Ads on article

Advertise in articles 1

advertising articles 2

Advertise under the article