ಬೆಳಗಾವಿ :ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ ವೇಳೆ ದುರಂತ ; ಚಿಕ್ಕೋಡಿ ಬಳಿ ಬೈಕ್ ಗೆ ಲಾರಿ ಡಿಕ್ಕಿ , ಮಗಳು ಸ್ಥಳದಲ್ಲೇ ಸಾವು...!!

ಬೆಳಗಾವಿ :ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ ವೇಳೆ ದುರಂತ ; ಚಿಕ್ಕೋಡಿ ಬಳಿ ಬೈಕ್ ಗೆ ಲಾರಿ ಡಿಕ್ಕಿ , ಮಗಳು ಸ್ಥಳದಲ್ಲೇ ಸಾವು...!!

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಅಲಖನೂರ ಗ್ರಾಮದ ಹೊರವಲಯದ ಜಮಖಂಡಿ–ಮೀರಜ್ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರನ್ನು ಗಿರೇಪ್ಪಾ ಕುಂದರಾಳಿ (38), ಪತ್ನಿ ಮಂಜುಳಾ ಕುಂದರಾಳಿ (28) ಹಾಗೂ ಮಗಳು ಆರಾಧ್ಯಾ (7) ಎಂದು ಗುರುತಿಸಲಾಗಿದೆ. ಗಿರೇಪ್ಪಾ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜಯಸಿಂಗಪುರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಮೃತರು ಮಹಾರಾಷ್ಟ್ರದ ಸಂಗ್ಲಿ ಜಿಲ್ಲೆಯ ಜಯಸಿಂಗಪುರದಿಂದ ಬಾಗಲಕೋಟ ಜಿಲ್ಲೆಯ ಜಮಖಂಡಿ ಪಟ್ಟಣದತ್ತ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಅಲಖನೂರ ಗ್ರಾಮದ ಹೊರವಲಯದ ಜಮಖಂಡಿ–ಮೀರಜ್ ರಾಜ್ಯ ಹೆದ್ದಾರಿಯಲ್ಲಿ ಸಾಗುವ ವೇಳೆ ಎದುರಿನಿಂದ ಬಂದ ಲಾರಿ ಬೈಕ್‌ಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನನ್ನು ವಶಕ್ಕೆ ಪಡೆದ ಹಾರುಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article