ಬೆಂಗಳೂರು: ಬೈರತಿ ಸುರೇಶ್ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳ್ಳತನ ! ಡಿ ಗ್ರೂಪ್ ನೌಕರ ಪೊಲೀಸರ ವಶಕ್ಕೆ..!!!

ಬೆಂಗಳೂರು: ಬೈರತಿ ಸುರೇಶ್ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳ್ಳತನ ! ಡಿ ಗ್ರೂಪ್ ನೌಕರ ಪೊಲೀಸರ ವಶಕ್ಕೆ..!!!

ಬೆಂಗಳೂರು : ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಬೈರತಿ ಸುರೇಶ್ ಅವರ ವಿಧಾನಸೌಧದಲ್ಲಿರುವ ಕಚೇರಿಯಿಂದ 300 ಗ್ರಾಂ ಚಿನ್ನಾಭರಣ ಮತ್ತು 1.5 ಲಕ್ಷ ನಗದು ಕಳ್ಳತನವಾದ ಘಟನೆ ನಡೆದಿದ್ದು ಸಿಸಿಟಿವಿ ಆಧರಿಸಿ ಕಳವುಗೈದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

ನವೀನ್ ಎಂಬ ವ್ಯಕ್ತಿ ಕೆಲಸದ ನಿಮಿತ್ತ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ಆಗಮಿಸಿದ್ದು ಈ ವೇಳೆ ತನ್ನೊಂದಿಗೆ ತಂದಿದ್ದ ಚಿನ್ನಾಭರಣ ಮತ್ತು ಹಣವುಳ್ಳ ಬ್ಯಾಗ್ ಮರೆತು ಹೋಗಿದ್ದರು. ಮರುದಿನ ಕಚೇರಿಗೆ ಬಂದು ನೋಡಿದಾಗ ಸಚಿವರ ಕಚೇರಿಯಲ್ಲಿ ಚಿನ್ನ ಮತ್ತು ಹಣವುಳ್ಳ ಚೀಲ ಇರಲಿಲ್ಲ. ತಕ್ಷಣವೇ ನವೀನ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು ಈ ವೇಳೆ ಡಿಪಿಎಆರ್ ‘ಡಿ’ ಗ್ರೂಪ್ ನೌಕರನೊಬ್ಬ ಬ್ಯಾಗ್ ಹಿಡಿದು ಕಚೇರಿಯಿಂದ ಹೊರಗಡೆ ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಇದರ ಆಧಾರದಲ್ಲಿ ಪೊಲೀಸರು ನೌಕರನನ್ನು ಬಂಧಿಸಿದೆ. ಆದರೆ, ವಿಧಾನಸೌಧದೊಳಗೆ ಇಷ್ಟೊಂದು ಮೌಲ್ಯದ ಚಿನ್ನಾಭರಣ ಮತ್ತು ನಗದು ಹೇಗೆ ಬಂತು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿಸಿದೆ. ಮೆಟಲ್ ಡಿಟೆಕ್ಟರ್ ಹಾಗೂ ಭದ್ರತಾ ತಪಾಸಣೆಯೂ ಪ್ರಶ್ನೆಗೆ ಒಳಗಾಗಿದೆ

Ads on article

Advertise in articles 1

advertising articles 2

Advertise under the article