“ಕಾಂತಾರ'ದ “ವರಾಹ ರೂಪಂ' ಹಾಡಿನ ಪ್ರಸಾರಕ್ಕೆ ನ್ಯಾಯಾಲಯದಿಂದ ತಡೆ:ಕೂಡಲೇ ಹಾಡಿನ ಪ್ರಸಾರ ಸ್ಥಗಿತಗೊಳಿಸುವಂತೆ ಕೇರಳ ಜಿಲ್ಲಾ ಪ್ರದಾನ ನ್ಯಾಯಾಲಯ ಆದೇಶ
Friday, October 28, 2022
ಕ್ಯಾಲಿಕಟ್: ಥೈಕುಡಂ ಬ್ರಿಡ್ಜ್ ಸಂಗೀತ ಬ್ಯಾಂಡ್‌ನ ಅನುಮತಿಯಿಲ್ಲದೇ “ವರಾಹ ರೂಪಂ’ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು “ಕಾಂತಾರ’ ಚಿತ್ರತಂಡಕ್ಕೆ ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನಿರ್ಬಂಧ ವಿಧಿಸಿದೆ.
ಸಿನಿಮಾ ಮಂದಿರ ಹಾಗೂ ಸ್ಟ್ರೀಮಿಂಗ್ ಪ್ಲಾಟ್‌ಫಾರಂಗಳಲ್ಲಿ ಈ ಹಾಡಿನ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಶುಕ್ರವಾರ ನ್ಯಾಯಾಲಯ ಆದೇಶ ನೀಡಿದೆ. “ಕಾಂತಾರ’ ಸಿನಿಮಾದಲ್ಲಿನ ವರಾಹ ರೂಪಂ ಹಾಡಿನ ಕೆಲವು ಭಾಗಗಳನ್ನು ನಮ್ಮ ಒರಿಜಿನಲ್ “ನವರಸಂ’ ಹಾಡಿನಿಂದ ನೇರವಾಗಿ ಕಾಪಿ ಮಾಡಲಾಗಿದೆ ಎಂದು ಆರೋಪಿಸಿ ಥೈಕುಡಂ ಬ್ರಿಡ್ಜ್ ಸಂಗೀತ ಬ್ಯಾಂಡ್ ಕೋರ್ಟ್ ಮೆಟ್ಟಿಲೇರಿತ್ತು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಆದೇಶ ಹೊರಡಿಸಿರುವ ನ್ಯಾಯಾಲಯ, “ವರಾಹ ರೂಪಂ ಹಾಡಿನ ಪ್ರಸಾರ ಕೂಡಲೇ ಸ್ಥಗಿತಗೊಳಿಸಬೇಕು’ ಎಂದು ಕಾಂತಾರ ಚಿತ್ರತಂಡಕ್ಕೆ ಸೂಚಿಸಿದೆ. ಜತೆಗೆ, ಥೈಕುಡಂ ಬ್ರಿಡ್ಜ್ ಸಂಗೀತ ಬ್ಯಾಂಡ್ ನ ಒಪ್ಪಿಗೆಯಿಲ್ಲದೇ ಹಾಡನ್ನು ಬಳಸಬಾರದು ಎಂದು ಅಮೆಜಾನ್, ಯೂಟ್ಯೂಬ್, ನ್ಪೋಟಿಫೈ, ಜಿಯೋಸಾವನ್ ಗೆ ನಿರ್ದೇಶನ ನೀಡಿದೆ