ಮಂಗಳೂರು: ಪಚ್ಚನಾಡಿ ಆಟದ ಮೈದಾನದಲ್ಲಿ ಅಕ್ರಮವಾಗಿ ಮನೆ ನಿರ್ಮಾಣಕ್ಕೆ ಹುನ್ನಾರ; ಸ್ಥಳೀಯ ಮನಪಾ ಸದಸ್ಯೆಯ ಪತಿಯ ದರ್ಬಾರ್
Thursday, December 15, 2022
ಮಂಗಳೂರು: ನಗರದ ಪಚ್ಚನಾಡಿಯ ಸರಕಾರಿ ಜಾಗದಲ್ಲಿರುವ ಆಟದ ಮೈದಾನವನ್ನು ಕಬಳಿಸಿ ಅಕ್ರಮವಾಗಿ ಮನೆ ನಿರ್ಮಾಣಕ್ಕೆ ಯತ್ನಿಸಲಾಗುತ್ತಿದೆ ಎಂದು ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಈ ವೇಳೆ ಮನಪಾ ಸದಸ್ಯೆಯ ಪತಿ ಸ್ಥಳೀಯರನ್ನು ದಬಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರು ಹೊರವಲಯದ ಪಚ್ಚನಾಡಿಯ ಕಾರ್ಮಿಕ ನಗರದಲ್ಲಿ ಪ್ರಕರಣ ನಡೆದಿದೆ. ಪಚ್ಚನಾಡಿ ವಾರ್ಡ್ ಕಾರ್ಪೊರೇಟರ್ ಸಂಗೀತ ನಾಯಕ್ ಪತಿ ರವೀಂದ್ರ ನಾಯಕ್ ಮತ್ತು ಸ್ಥಳೀಯರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ. ಎರಡು ಎಕರೆ ಸರ್ಕಾರಿ ಜಾಗದಲ್ಲಿ ಆಟದ ಮೈದಾನವಿತ್ತು. ಸದ್ಯ ಈ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣಕ್ಕೆ ಯತ್ನ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸರ್ಕಾರಿ ಜಾಗ ಕಬಳಿಸಲು ಯತ್ನಿಸಿದ ಆರೋಪದಡಿ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಅಕ್ರಮ ಮನೆ ನಿರ್ಮಾಣ ಕಾರ್ಯ ಕ್ಕೆ ಸ್ಥಳೀಯರು ತಡೆಯೊಡ್ಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಕಾರ್ಪೊರೇಟರ್ ಪತಿ ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಬಳಿಕ ಪರಿಸ್ಥಿತಿ ನಿಯಂತ್ರಿಸಿ ಈ ಸ್ಥಳವನ್ನು ಮೈದಾನವಾಗಿಯೇ ಉಳಿಸುವ ಭರವಸೆಯನ್ನು ಕಾರ್ಪೋರೇಟರ್ ಸಂಗೀತ ನಾಯಕ್ ನೀಡಿದ್ದಾರೆ.
Video