ಕಲಿಕಾ ಹಬ್ಬ;ಶಿಕ್ಷಕರಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ
Friday, January 6, 2023
ಮಂಗಳೂರು: ಶಿಕ್ಷಕರಿಗೆ 'ಕಲಿಕಾ ಹಬ್ಬ' ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರ ನಗರದ ಮುಲ್ಲಕಾಡಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯ ಎಲ್ಲಾ ತಾಲೂಕುಗಳ ಶಾಲೆಯ 135 ಮಂದಿ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಅರವಿಂದ ಕುಡ್ಲ, ಪ್ರೇಮನಾಥ್ ಮೇರ್ಣೆ, ಚೇತನ್ ಕೊಪ್ಪ, ರಾಜೇಶ್ ನೆಲ್ಯಾಡಿ, ರಶ್ಮಿತಾ ಜೈನ್, ತೇಜಸ್ವಿ ಅಂಬೆಬೆಟ್ಟು, ಗೋಪಾಲಕೃಷ್ಣ ಅನಂತಾಡಿ ಮೂರು ದಿನಗಳ ಕಾಲ ತರಬೇತಿ ನೀಡಿದರು. ಮುಂದೆ ಪ್ರತೀ ಕ್ಲಸ್ಟರ್ ವಿದ್ಯಾರ್ಥಿಗಳಿಗೆ ಕಲಿಕಾ ಹಬ್ಬವನ್ನು ಏರ್ಪಡಿಸಲಾಗುತ್ತದೆ. ಇದೊಂದು ವಿನೂತನ ಕಾರ್ಯಾಗಾರವಾಗಿದ್ದು ವಿದ್ಯಾರ್ಥಿಗಳ ಸಂತಸ ಕಲಿಕೆ ಪೂರಕವಾಗುವುದೆಂದು ತರಬೇತಿ ಪಡೆದ ಶಿಕ್ಷಕರು ಹೇಳಿದರು.
ಕಲಿಕಾ ಹಬ್ಬ ತರಬೇತಿ ಕಾರ್ಯ ಗಾರದಲ್ಲಿ 4 ಕಾರ್ನರ್ ನಲ್ಲಿ ಹಾಡು ಆಡು,ಮಾಡು ಆಡು,ಕಾಗದ ಕತ್ತರಿ,
ಊರು ಸುತ್ತೋಣ ಎಂಬ ನಾಲ್ಕು ವಿಚಾರಗಳಲ್ಲಿ ಹಲವಾರು ರೀತಿಯ ಚಟುವಟಿಕೆಗಳನ್ನು ಕಲಿಕೆಗೆ ಪೂರಕವಾಗುವ ಅಂಶಗಳೊಂದಿಗೆ ಮಾಡಲಾಯಿತು