ಮಂಗಳೂರು:ಬೋಂದೆಲ್ ಕೃಷ್ಣನಗರ ಅಂಗನವಾಡಿಯಲ್ಲಿ ಅಪೌಷ್ಟಿಕತೆ ದೂರವಾಗಿಸಲು ಪೋಷಣಾ ಅಭಿಯಾನ
Thursday, September 22, 2022
ಮಹಿಳೆಯರು ಮತ್ತು ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಸಮಾಜ ಆರೋಗ್ಯವಾಗಿರುತ್ತದೆ ಎಂಬ ಆಶಯದೊಂದಿಗೆ ದೇಶದ ಪ್ರಧಾನಿಗಳು ರಾಷ್ಟ್ರೀಯ ಪೋಷಣ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾಕು ಹೇಳಿದರು.
ನಗರದ ಬೋಂದೆಲ್ ಕೃಷ್ಣ ನಗರ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಪೋಷಣಾ ಮಾಸಾಚರಣೆ ಮತ್ತು ಮಾತೃವಂದನಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗರ್ಭಿಣಿ, ಬಾಣಂತಿ, ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಫಲಾನುಭವಿಗಳು ಪ್ರಯೋಜನ ಪಡೆಯಬೇಕು ಎಂದರು.
ಪೋಷಣಾ ಅಭಿಯಾನದ ಜಿಲ್ಲಾ ಸಂಯೋಜಕರಾದ ಬಬಿತಾ ಅಧ್ಯಕ್ಷತೆ ವಹಿಸಿ ಮಾತನಾಡಿ ಪೋಷಣಾ ಅಭಿಯಾನ ಯೋಜನೆಯಡಿಯಲ್ಲಿ ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ಫಲಾನುಭವಿಗಳ ಮಾಹಿತಿಯನ್ನು ಸರಿಯಾಗಿ ಕ್ರೋಢೀಕರಿಸಿದರೆ ಸೌಲಭ್ಯ ಪಡೆಯುವುದು ಸುಲಭ ಎಂದರು .
ಪೋಷಣಾ ಅಭಿಯಾನ ತಾಲೂಕು ಸಂಯೋಜಕ ಮಿಥೇಶ್,ಆರೋಗ್ಯ ಕಾರ್ಯ ಕರ್ತರಾದ ಪವಿತ್ರ, ಜಯ,ಬಾಲವಿಕಾಸ ಸಮಿತಿ ಅಧ್ಯಕ್ಷೆ ಪವಿತ್ರ ಉಪಸ್ಥಿತರಿದ್ದರು.
ಹಲವು ಬಗೆಯ ಪೌಷ್ಠಿಕ ಆಹಾರ ಪ್ರದರ್ಶನ ಹಾಗೂ ಉತ್ತಮ ಆಹಾರ ತಯಾರಿಕೆಗೆ ಬಹುಮಾನ,ಸ್ಮರಣಿಕೆ ನೀಡಲಾಯಿತು .ತರಕಾರಿ, ಸೊಪ್ಪು, ಧಾನ್ಯಗಳ ಪ್ರದರ್ಶನ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಗಿಡಗಳನ್ನು ನೆಡಲಾಯಿತು.
ಕಾರ್ಯಕರ್ತೆ ಕವಿತಾ ಸ್ವಾಗತಿಸಿ ವಂದಿಸಿದರು. ಕಾರ್ಯಕರ್ತೆ ಬಬಿತಾ ಕಾರ್ಯಕ್ರಮ ನಿರೂಪಿಸಿದರು.