ವೃಷಭ: ವೃತ್ತಿಯಲ್ಲಿ ಬದಲಾವಣೆ ಕಂಡುಬರಲಿದ್ದು, ಸಮಾಧಾನ ತರಲಿದೆ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸುವುದು ಸೂಕ್ತ ಮತ್ತು ಲಾಭದಾಯಕ.
ಮಿಥುನ: ನಿಮ್ಮ ನಡವಳಿಕೆ ಇತರರಿಗೆ ಗೊಂದಲಮಯವಾಗಿ ಕಂಡರೂ ಅಸಹಾಯಕತೆ ಕಾಡಬಹುದು. ಕೆಲವೊಂದು ಪ್ರಯತ್ನಗಳು ಅಗತ್ಯವಾಗುವುದರಿಂದ ಧೈರ್ಯದಿಂದ ಮುಂದುವರಿಯಿರಿ.
ಕರ್ಕಾಟಕ: ಅನಿವಾರ್ಯ ಪರಿಸ್ಥಿತಿಯಲ್ಲಿಯೂ ಯಾರಿಗೂ ಸಾಲ ಕೊಡಬೇಡಿ. ನಂಬಿಸಿ ಮೋಸ ಮಾಡುವವರು ಸುತ್ತಲೂ ಇರುವುದರಿಂದ ಜಾಗ್ರತೆ ವಹಿಸಿ. ಕುಟುಂಬದ ಸಂತೋಷ ಹರ್ಷ ತರಲಿದೆ.
ಸಿಂಹ: ಕಾರಣವಿಲ್ಲದೆ ನಡೆದುಕೊಂಡು ಬಂದ ಪದ್ಧತಿಗಳ ಬಗ್ಗೆ ಸಂಶೋಧನೆ ಮಾಡಲಿದ್ದೀರಿ. ಕಟ್ಟಡ ಕಾರ್ಮಿಕರಿಗೆ ಹೆಚ್ಚಿನ ಸಂಪಾದನೆಯ ಜೊತೆಗೆ ಉಡುಗೊರೆ ಸಿಗಲಿದೆ.
ಕನ್ಯಾ: ಹಿರಿಯರೊಂದಿಗೆ ನಡೆಸುವ ಅನವಶ್ಯಕ ವಾದಗಳು ಏಳಿಗೆಗೆ ಧಕ್ಕೆ ಉಂಟುಮಾಡಬಹುದು. ಗೃಹೋಪಯೋಗಿ ವಸ್ತುಗಳ ಉದ್ಯಮಿಗಳಿಗೆ ವ್ಯಾಪಾರ ಉತ್ತಮವಾಗಿರಲಿದೆ. ಇಷ್ಟಾರ್ಥಗಳು ಸಿದ್ಧಿಸಲಿವೆ.
ತುಲಾ: ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಕಲಾಸೇವೆಯನ್ನು ಗುರುತಿಸಿ ಸನ್ಮಾನ ನಡೆಯಲಿದೆ. ಜಗನ್ಮಾತೆಯನ್ನು ಆರಾಧಿಸುವುದರಿಂದ ಶುಭವಾಗಲಿದೆ.
ವೃಶ್ಚಿಕ: ಕಟ್ಟಡ ಗುತ್ತಿಗೆದಾರರಿಗೆ ಆರ್ಥಿಕವಾಗಿ ನಷ್ಟವಾಗುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆ ವಹಿಸಿ. ನೆಲೆನಿಂತ ಮಗ ಹಾಗೂ ಆತನ ಕುಟುಂಬದ ಬಗ್ಗೆ ಮನಸ್ಸಿಗೆ ನಿರಾಳತೆ ಸಿಗಲಿದೆ.
ಧನು: ತಂದೆ, ತಾಯಿ ಅಥವಾ ಹಿರಿಯರ ಆರೋಗ್ಯ ಉತ್ತಮವಾಗಿರಲಿದೆ. ಸಂಧಾನ ಅಥವಾ ಕರಾರು ಒಪ್ಪಂದಗಳು ಅನುಕೂಲಕರವೆನಿಸಲಿವೆ. ಮನೆಯಲ್ಲಿ ಸ್ವಲ್ಪ ಮಟ್ಟಿನ ಹೊಂದಾಣಿಕೆ ಅಗತ್ಯವಾಗಲಿದೆ.
ಮಕರ: ಜವಾಬ್ದಾರಿಯುತ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗುವಿರಿ. ಹಳೆಯ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವಿರಿ. ಸ್ಪರ್ಧಾತ್ಮಕ ವಾತಾವರಣ ಎದುರಾಗಲಿದೆ.
ಕುಂಭ: ಕೆಲಸಗಳೆಲ್ಲ ಬಿರುಸಿನಿಂದ ಸಾಗಲಿವೆ. ಅನಿವಾರ್ಯ ಪ್ರಯಾಣವಿದ್ದಲ್ಲಿ ರಾಹುಕಾಲದ ನಂತರ ಪ್ರಯಾಣ ಬೆಳೆಸಿ. ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ.
ಮೀನ: ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ನಾಲ್ಕು ಜನರ ಮಧ್ಯೆ ನಿಮಗೆ ನಾಯಕತ್ವದ ಪಟ್ಟ ಪ್ರಾಪ್ತಿಯಾಗಲಿದೆ. ಜಾಗರೂಕತೆಯಿಂದ ವರ್ತಿಸಿ.
ಇಂದಿನ ಪಂಚಾಂಗ
- ದಿನಾಂಕ: 24 ನವೆಂಬರ್ 2026, ಮಂಗಳವಾರ
- ಸಂವತ್ಸರ: ಶ್ರೀ ಪರಾಭವ ನಾಮ ಸಂವತ್ಸರ
- ಆಯನ: ದಕ್ಷಿಣಾಯಣ
- ಋತು: ಶರತ್ ಋತು
- ತಿಥಿ: ಕಾರ್ತಿಕ ಶುಕ್ಲ ಪೂರ್ಣಿಮೆ, ರಾತ್ರಿ 8:24ರವರೆಗೆ
- ನಕ್ಷತ್ರ: ಕೃತ್ತಿಕಾ, ರಾತ್ರಿ 11:25ರವರೆಗೆ
- ಯೋಗ: ಪರಿಘ, ಸಂಜೆ 4:06ರವರೆಗೆ
- ಕರಣ: ವಿಷ್ಟಿ, ಬೆಳಗ್ಗೆ 10:06ರವರೆಗೆ
- ರಾಹುಕಾಲ: ಮಧ್ಯಾಹ್ನ 3:00ರಿಂದ ಸಂಜೆ 4:30ರವರೆಗೆ
- ಸೂರ್ಯೋದಯ: ಬೆಳಗ್ಗೆ 6:38
- ಸೂರ್ಯಾಸ್ತ: ಸಂಜೆ 5:57
- ದಿನ ವಿಶೇಷ: ಕಾರ್ತಿಕ ಪೂರ್ಣಿಮೆ
- ಅದೃಷ್ಟ ಸಂಖ್ಯೆಗಳು: 5, 3
- ಮುಸ್ಲಿಂ ದಿನಾಂಕ: 13 ಜುಮಾದಾ ಅಲ್-ಥಾನಿ