ಕಿನ್ನಿಗೊಳಿಯಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಗಂಭೀರ ಗಾಯ
Saturday, January 1, 2022
ಮುಲ್ಕಿ: ಬೈಕ್ ಹಾಗೂ ಆಟೊ ರಿಕ್ಷಾ ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಬೈಕ್ ಸವಾರ ಪವಾಡ ಸದೃಶ ಪಾರಾದ ಘಟನೆ ಇಂದು ನಗರದ ಹೊರವಲಯದ ಕಿನ್ನಿಗೋಳಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಅಪಘಾದಲ್ಲಿ ಬೈಕ್ ಸವಾರ ಕಿನ್ನಿಗೋಳಿ ಐಕಳ ನೆಲ್ಲಿಗುಡ್ಡೆ ನಿವಾಸಿ ಪ್ರೇಮ್ ಸಲ್ದಾನ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಿನ್ನಿಗೋಳಿಯ ಬಂಕ್ ನಲ್ಲಿ ಪೆಟ್ರೋಲ್ ಹಾಕಿ ಏಕಾಏಕಿ ಹೆದ್ದಾರಿ ಕಡೆಗೆ ಕ್ರಾಸ್ ಆದ ಬೈಕ್ ಗೆ ಕಿನ್ನಿಗೋಳಿ ಕಡೆಯಿಂದ ಬರುತ್ತಿದ್ದ ಆಟೋರಿಕ್ಷಾ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ಆಟೋ ರಸ್ತೆ ಬದಿಯ ಚರಂಡಿಯತ್ತ ಎಸೆಯಲ್ಪಟ್ಟರೆ ಬೈಕ್ ಕೂಡ ಪಲ್ಟಿಯಾಗಿ ಸವಾರ ರಸ್ತೆಗೆ ಬಿದ್ದಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಪ್ರೇಮ್ ಸಲ್ದಾನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಟೋ ಚಾಲಕ ಆಸೀಮ್ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.