Mangalore: ಕಚೇರಿ ಸಮಸ್ಯೆಗಳ ಮುಕ್ತಿಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಮುಷ್ಕರ

Mangalore: ಕಚೇರಿ ಸಮಸ್ಯೆಗಳ ಮುಕ್ತಿಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಮುಷ್ಕರ

ಮಂಗಳೂರು: ಕಚೇರಿ ಸಮಸ್ಯೆಗಳ ಮುಕ್ತಿ ಕೊಡಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು ನಗರದ ವೆಲೆನ್ಸಿಯಾದಲ್ಲಿ ಮುಷ್ಕರ ನಡೆಸಿದರು.

ಮೂರುವರ್ಷಗಳ ಹಿಂದೆ ತಮಗೆ ನೀಡಿರುವ ಸ್ಮಾರ್ಟ್ ಫೋನ್ ಗಳು ಹ್ಯಾಂಗ್ ಆಗುತ್ತಿದ್ದು, ಕೆಲಸ ಮಾಡಲು ಆಗುತ್ತಿಲ್ಲ. ಆದರೆ ಅಧಿಕಾರಿಗಳು ತಮ್ಮದೇ ಸ್ವಂತ ಮೊಬೈಲ್ ನಲ್ಲಿಯೇ ಪೋಷಣೆ ಟ್ರ್ಯಾಕರ್ ಕೆಲಸ ಮಾಡಲು ಒತ್ತಡ ಹೇರುತ್ತಿದ್ದಾರೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಮಾನಸಿಕವಾಗಿ ನೊಂದಿದ್ದಾರೆ. ಆದ್ದರಿಂದ ಪೋಷಣೆ ಟ್ರ್ಯಾಕರ್ ಗೆ ಬೇರೆ ವ್ಯವಸ್ಥೆ ಮಾಡಬೇಕು‌ ಎಂದು ಒಕ್ಕೊರಲಿನಿಂದ ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದರು.

ಟೆಂಡರ್ ಮೂಲಕ ಅಂಗನವಾಡಿಗೆ ಸರಬರಾಜು ಆಗುತ್ತಿರುವ ಮೊಟ್ಟೆಗಳು ಕೊಳೆತು ನಾರುತ್ತಿದೆ. ಹುಳುಗಳು ಕಂಡು ಬರುತ್ತಿದೆ. ಫಲಾನುಭವಿಗಳು ಅಂಗವಾಡಿ ಕಾರ್ಯಕರ್ತೆಯರನ್ನು ಈ ಬಗ್ಗೆ ಆಕ್ಷೇಪಿಸುತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆ ಫಲಾನುಭವಿಗಳಿಗೆ ಮೊಟ್ಟೆಯನ್ನು ನೀಡದೆ. ಅದರ ಮೌಲ್ಯದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಮುಷ್ಕರದಲ್ಲಿ ಒತ್ತಾಯ ಕೇಳಿ ಬಂತು.



Ads on article

Advertise in articles 1

advertising articles 2

Advertise under the article