Udupi: ಹಿಜಾಬ್ ವಿವಾದ-ಶಾಸಕ ರಘುಪತಿ ಭಟ್ ಗೆ ವಿದೇಶಗಳಿಂದ ಬೆದರಿಕೆ ಕರೆ
Friday, February 11, 2022
ಉಡುಪಿ: ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು ಉಡುಪಿ ಶಾಸಕ ರಘುಪತಿ ಭಟ್ ಗೆ ವಿದೇಶಗಳಿಂದ ಬೆದರಿಕೆ ಕರೆಗಳು ಬಂದಿವೆ. ಸ್ವತಃ ಶಾಸಕರೇ ಈ ವಿಷಯವನ್ನು ಬಹಿರಂಗಪಡಿಸಿದ್ದು ಇಂಟರ್ನೆಟ್ ಮೂಲಕ ನನಗೆ ವಿದೇಶದಲ್ಲಿ ಕೂತು ಕಿಡಿಗೇಡಿಗಳು ಬೆದರಿಸುತ್ತಿದ್ದಾರೆ ಎಂದಿದ್ದಾರೆ.
ಎಸ್ಪಿಯವರು ನನಗೆ ಗನ್ ಮ್ಯಾನ್ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ. ಆದ್ರೆ ನನಗೆ ಯಾವುದೇ ಗನ್ ಮ್ಯಾನ್ ಬೇಡ, ನನಗೆ ಭದ್ರತೆಗಾಗಿ ನನ್ನ ಜನಗಳೇ ಇದ್ದಾರೆ ಎಂದು ಹೇಳಿ ಗನ್ ಮ್ಯಾನ್ ತಿರಸ್ಕರಿಸಿದ್ದೇನೆ. ಇಂತಹ ಬೆದರಿಕೆ ಕರೆಗಳಿಗೆ ಹೆದರುವ ವ್ಯಕ್ತಿ ನಾನಲ್ಲ ಎಂದಿದ್ದಾರೆ.
ಇನ್ನು ಇಂಟರ್ನೆಟ್ ಕಾಲ್ ಮೂಲಕ ಹಲವರು ಬೆದರಿಸುತ್ತಿದ್ದಾರೆ.ಹೈದರಾಬಾದ್ ನಿಂದ ಫೋನ್ ವಾಟ್ಸಪ್ ಫೇಸ್ಬುಕ್ ಮೂಲಕ ಥ್ರೆಟ್ ಹಾಕುತ್ತಿದ್ದಾರೆ.
ನಾನು ಕಾಲೇಜಿನ ಸಮವಸ್ತ್ರ ವಿಚಾರ ಬಿಟ್ಟು ಬೇರೆ ಯಾವ ವಿಚಾರದ ಬಗ್ಗೆಯೂ ಚರ್ಚೆ ಮಾಡಿಲ್ಲ, ಮಾತನಾಡಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.