ಮಂಗಳೂರು: ಕೇಂದ್ರ ಸರಕಾರ ಎಸ್ ಡಿಪಿಐ, ಮದರಸಾಗಳ ಮೇಲೂ ನಿರ್ಬಂಧ ಹೇರಲಿ; ರಾಜೇಶ್ ಪವಿತ್ರನ್
Thursday, September 29, 2022
ಮಂಗಳೂರು: ಪಿಎಫ್ಐ ಅಂತಹ ಸಂಘಟನೆಗಳು ದೇಶದಲ್ಲಿ ವಿದ್ವಂಸಕ ಕೃತ್ಯಗಳನ್ನು ಮಾಡಲು ಮದರಸಾಗಳಲ್ಲಿ ನೀಡುವ ಧರ್ಮಶಿಕ್ಷಣವೇ ಕಾರಣ. ಆದ್ದರಿಂದ ಇಂತಹ ಶಿಕ್ಷಣವನ್ನು ನೀಡುವ ಮದರಸಾಗಳು ನಿರ್ಬಂಧವಾಗಲಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದರು.
ಪಿಎಫ್ಐಯನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿರೋದು ಸ್ವಾಗತಾರ್ಹ. ಆದರೆ ಎಸ್ ಡಿಪಿಐಯನ್ನು ಇನ್ನೂ ಬ್ಯಾನ್ ಮಾಡಿಲ್ಲ. ಕಾನೂನಿನ ತೊಡಕುಗಳಿದ್ದರೂ ಕೇಂದ್ರ ಸರಕಾರ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಆದ್ದರಿಂದ ಮದರಸಾಗಳು ಹಾಗೂ ಎಸ್ ಡಿಪಿಐ ನಿರ್ಬಂಧವಾದಲ್ಲಿ ಈ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯ ಎಂದು ಹೇಳಿದರು.
ಕೇಂದ್ರ ಸರಕಾರ ಮುಂದಿನ ಚುನಾವಣಾ ಲಾಭಕ್ಕಾಗಿ
ಪಿಎಫ್ಐ ಸಂಘಟನೆಯ ಮುಖವಾಣಿಯೂ, ರಾಜಕೀಯ ಪಕ್ಷವೂ ಆಗಿರುವ ಎಸ್ ಡಿಪಿಐಯನ್ನು ನಿಷೇಧ ಮಾಡಿಲ್ಲವೆಂಬ ಅನುಮಾನಗಳಿವೆ. ಬಿಜೆಪಿ ತನ್ನ ಚುನಾವಣಾ ತೀಟೆಗಾಗಿ ಓವೈಸಿಯ ಪಕ್ಷ ಹಾಗೂ ಎಸ್ ಡಿಪಿಐಯನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿ ಹಿಂದೂ ಪಕ್ಷವಲ್ಲ ಬದಲಾಗಿ ಅದೊಂದು ಭ್ರಷ್ಟ ಜನರ ಪಕ್ಷವಾಗಿದ್ದು, ಕೇವಲ ಬೂಟಾಟಿಕೆಯ ಪ್ರದರ್ಶನ ಮಾಡುತ್ತಿದೆ ಎಂದು ರಾಜೇಶ್ ಪವಿತ್ರನ್ ಆಗ್ರಹಿಸಿದರು.