ಜನಾರ್ದನ ಪೂಜಾರಿಯವರಿಂದ ಮಂಗಳೂರು ದಸರಾ ಉದ್ಘಾಟನೆ
Saturday, September 24, 2022
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ-2022 ಉದ್ಘಾಟನೆ ಸೆ.26ರಂದು ಬೆಳಗ್ಗೆ 11.15ಕ್ಕೆ ಕೇಂದ್ರದ ಮಾಜಿ ಸಹಾಯಕ ವಿತ್ತ ಸಚಿವ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರಿಂದ ನೆರವೇರಲಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಪೂಜಾರಿಯವರ ಆಶಯದಂತೆ ವರ್ಣರಂಜಿತ ಅದ್ದೂರಿ ದಸರಾ ದರ್ಬಾರ್ ಮಂಟಪ ಸಿದ್ಧಗೊಂಡಿದ್ದು, ಅತ್ಯಾಕರ್ಷಕ ಹಾಗು ಅದ್ದೂರಿ ದಸರಾ ಆಚರಣೆಗೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ...