ಪಿಎಫ್ಐ ನಿಷೇಧದ ಬಳಿಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ವಿದೇಶಿ ಇಂಟರ್ ನೆಟ್ ಕರೆಗಳ ಮೂಲಕ ಜೀವ ಬೆದರಿಕೆ pfi

ಪಿಎಫ್ಐ ನಿಷೇಧದ ಬಳಿಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ವಿದೇಶಿ ಇಂಟರ್ ನೆಟ್ ಕರೆಗಳ ಮೂಲಕ ಜೀವ ಬೆದರಿಕೆ pfi

ದೇಶದಲ್ಲಿ ಪಿ.ಎಫ್.ಐ ನಿಷೇಧದ ಬಳಿಕ ವಿದೇಶಗಳಿಂದ ನಿರಂತರವಾಗಿ ಇಂಟರ್ ನೆಟ್ ಕರೆಗಳ ಮೂಲಕ ತನಗೆ ಜೀವ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅವರು ಶುಕ್ರವಾರ ಉಡುಪಿಯಲ್ಲಿ ಮಾಧ್ಯಮ  ಪ್ರತಿನಿಧಿಗಳ ಜೊತೆ ಮಾತನಾಡಿ ತನಗೂ ನಾಲ್ಕು ಸಂಖ್ಯೆಯ ವಿದೇಶಿ ನಂಬರ್ ಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ಪೋಲಿಸ್ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದರು.

 ಇಂಟರ್ ನೆಟ್ ಕರೆಗಳಾಗಿರುವುದರಿಂದ ಪೋಲಿಸರಿಗೆ ಈ ಸಂಖ್ಯೆಗಳು ಯಾರದ್ದೆಂದು ತಿಳಿಯಲು ಕಷ್ಟವಾಗಿದೆ. ಆದರೆ ಈ ಬೆದರಿಕೆ ಕರೆಗಳಿಗೆ ನಾವು ಹೆದರುವುದು,ಜಗ್ಗುವ ಪ್ರಮೇಯವೇ ಇಲ್ಲ ಎಂದರು

ಹಿಂದುತ್ವದ ವಿಚಾರವಾಗಿ ಮಾತನಾಡಿದಾಗಲೆಲ್ಲಾ ನನಗೆ ವಿದೇಶದಿಂದ ಬೆದರಿಕೆ ಕರೆಗಳು ಬಂದಿದೆ. ಆದರೆ ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುವವರಿಗೆ ತಕ್ಕ ಶಿಕ್ಷೆ ಆಗಬೇಕೆಂಬ ನಿಲುವಿಗೆ ಬದ್ದವಾಗಿರುವುದಾಗಿ  ಹೇಳಿದರು

Ads on article

Advertise in articles 1

advertising articles 2

Advertise under the article