ಕುಂದಾಪುರ :"ಕಾಂತಾರ " ಒಂದು ದಂತ ಕಥೆಯ ಮರಳು ಶಿಲ್ಪ
Thursday, October 20, 2022
"ಕಾಂತಾರ " ಒಂದು ದಂತ ಕಥೆಯ ಮರಳು ಶಿಲ್ಪ:-
ಕರಾವಳಿ ಭಾಗದ ಆಚರಣೆ, ಕ್ರೀಡೆ, ಧೈವರಾಧನೆ, ಜನರ ಮುಗ್ಧತೆ ಮತ್ತು ನಂಬಿಕೆಗೆ ಪಾತ್ರವಾದ ದೃಶ್ಯವನ್ನು ಪರಿಣಾಮಕಾರಿಯಾಗಿ ಕರಾವಳಿ ಭಾಗದ ಬಹುತೇಕ ಕಲಾವಿದರೊಳಗೊಂಡ ಚಿತ್ರೀಕರಿಸಿದ ಹೆಮ್ಮೆಯ ರಿಷಬ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಚಲನಚಿತ್ರಕ್ಕೊಂದು ಮರಳು ಶಿಲ್ಪದ ಮೂಲಕ ಅಭಿನಂದಿಸಲಾಯಿತು.
ಈ ಕಲಾಕೃತಿಯಲ್ಲಿ ರಕ್ಷಕ ಶಕ್ತಿಯನ್ನು ಸಾರಿದ ವರಹಾರೂಪಿ ಪಂಜುರ್ಲಿ ಮತ್ತು ದೈವದ ರೂಪ ದಲ್ಲಿ ಅವತರಿಸಿದ ನಟ ರಿಷಬ್ ಶೆಟ್ಟಿಯವರನ್ನು ಕೇಂದ್ರವಾಗಿರಿಸಿ, 4.00 ಅಡಿ ಎತ್ತರದ ಕಲಾಕೃತಿ ಯನ್ನು ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಪ್ರಸಾದ್ ಆರ್.(SAND THEME, udupi ತಂಡ)
ರಚಿಸಿದ ಮರಳು ಶಿಲ್ಪ ಹಳೇ ಅಳಿವೆ ಬೀಚ್, ಕೋಡಿ ಕುಂದಾಪುರ ಕಡಲ ತೀರದಲ್ಲಿ ಜನಕಾರ್ಷಣೆ ಗೊಂಡಿತು.