ಮೂಡುಬಿದ್ರೆ;ಅಕ್ರಮ ಕಸಾಯಿ ಖಾನೆಗೆ ಹಿಂದೂ ಜಾಗರಣಾ ವೇದಿಕೆ ದಾಳಿ-ಕಡಿಯಲು ತಂದಿದ್ದ 4 ಗೋವು ಮತ್ತು ಭಾರೀ ಪ್ರಮಾಣ ಮಾಂಸ ವಶ
Friday, December 23, 2022
ಮೂಡುಬಿದ್ರೆ; ಮನೆಯೊಂದರಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಜಾಗಕ್ಕೆ ಬೆಳ್ಳಂಬೆಳಗ್ಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಮೂಡುಬಿದ್ರೆಯ ಆಲಂಗಾರಿನಲ್ಲಿ ನಡೆದಿದೆ.
ಅಲಂಗಾರು ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂಡ ಎಂಬವನ ಮನೆಯಲ್ಲಿ ಅಕ್ರಮ ಕಸಾಯಿ ಖಾನೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಬೆಳಗ್ಗೆ ನಾಲ್ಕು ಗಂಟೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ಮನೆಯ ಒಳಗಿನ ಕೋಣೆಯಲ್ಲಿ ದನವನ್ನು ಕಡಿದು ಮಾಂಸ ಮಾಡುತ್ತಿದ್ದರು. ಇದಲ್ಲದೆ, ಕಡಿಯಲು ತಂದಿದ್ದ ನಾಲ್ಕು ಸಣ್ಣ ಪ್ರಾಯದ ಕರುಗಳನ್ನು ಒಳಗಡೆ ಕಟ್ಟಿದ್ದರು. ಭಾರೀ ಪ್ರಮಾಣದ ದನದ ಮಾಂಸ ಮತ್ತು ನಾಲ್ಕು ಗೋವುಗಳನ್ನು ವಶಕ್ಕೆ ಪಡೆಯಲಾಗಿದೆ.
ಮನೆ ಪಕ್ಕದ ತೋಟದಲ್ಲಿ ಅಗೆದು ನೋಡಿದಾಗ ಹಲವಾರು ದನದ ತಲೆಯ ಭಾಗಗಳು ಪತ್ತೆಯಾಗಿವೆ. ಆಲಂಗಾರು ನಿವಾಸಿಗಳಾದ ಕ್ಲಾರಿನ್ ಆಲ್ವಿನ್ ಮತ್ತು ಗಿಲ್ಬರ್ಟ್ ಮಿರಾಂಡ ಬಂಧಿತ ಆರೋಪಿಗಳು. ಮೂಡುಬಿದ್ರೆ ಠಾಣೆಯಲ್ಲಿ ಕೇಸು ದಾಖಲಾಗಿದೆ.