ಸ್ಮಾರ್ಟ್ ಮಂಗಳೂರು ಕಾಮಗಾರಿ: ರಸ್ತೆಬದಿಯ ಹೊಂಡಕ್ಕೆ ಬಿದ್ದ ಮಹಿಳೆ
Monday, December 19, 2022
ಮಂಗಳೂರು: ಅಂಬೇಡ್ಕರ್ ಸರ್ಕಲ್ ಬಳಿಯ ಕೆಎಂಸಿ ಮುಂಭಾಗದ ರಸ್ತೆಬದಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದ ಹೊಂಡಕ್ಕೆ ಪಾದಚಾರಿ ಮಹಿಳೆಯೋರ್ವರು ಬಿದ್ದ ಘಟನೆ ನಡೆದಿದೆ.
ಸ್ಮಾರ್ಟ್ ಸಿಟಿ ಕಾಮಗಾರಿಗೆಂದು ಹೊಂಡ ಅಗೆದು ಇಡಲಾಗಿತ್ತು. ಆದರೆ ರಸ್ತೆ ಬದಿಯಲ್ಲಿದ್ದ ಗುಂಡಿಯನ್ನು ಗಮನಿಸದ ಮಹಿಳೆ ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಅಲ್ಲಿಯೇ ಇದ್ದ ಅಂಗಡಿಗಳ ಸಿಬ್ಬಂದಿ ಮಹಿಳೆಯನ್ನು ಮೇಲಕ್ಕಿತ್ತಿದ್ದಾರೆ. ಅದೃಷ್ಟವಶಾತ್ ಮಹಿಳೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.