ಆಪರೇಷನ್ ಎಲಿಫೆಂಟ್ ಸಕ್ಸಸ್: ನರಹಂತಕ ಆನೆ ಸೆರೆ

ಆಪರೇಷನ್ ಎಲಿಫೆಂಟ್ ಸಕ್ಸಸ್: ನರಹಂತಕ ಆನೆ ಸೆರೆ

ಕಳೆದೆರಡು ದಿನಗಳಿಂದ ದಕ್ಷಿಣ ಕಡಬದಲ್ಲಿ ಅರಣ್ಯ ಅಧಿಕಾರಿಗಳಿಗೆ ತಲೆನೋವನ್ನು ತರಿಸಿರುವ ಕಾಡಾನೆಯು ಕೊನೆಗೂ ಸೆರೆಯಾಗಿದ್ದು, ಅಧಿಕಾರಿಗಳ ಶ್ರಮಕ್ಕೆ ಕೊನೆಗೂ ಫಲದೊರೆತಿದೆ.

ಕಡಬ ತಾಲೂಕಿನ ಕೊಂಬಾರು ಗ್ರಾಮದ ಮಂಡೆಕರ ಎಂಬಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಂದು ಸಂಜೆ ವೇಳೆಗೆ ಆನೆಯನ್ನು ಸೆರೆ ಹಿಡಿಯಲಾಗಿದೆ.
ಬುಧವಾರದಂದು ಐತ್ತೂರು ಗ್ರಾಮದ ಸುಳ್ಯ ಸಮೀಪ ಕಂಡುಬಂದಿದ್ದ ಆನೆಯನ್ನು ಸೆರೆಹಿಡಿಯಲು ಹರಸಾಹಸ ನಡೆಸಿದ್ದ ಅಧಿಕಾರಿಗಳು, ಪೊದರುಗಳ ನಡುವೆ ಅವಿತಿದ್ದ ಆನೆಯ ಮೇಲೆ ಶೂಟ್ ಮಾಡಿದ್ದ ಅರಿವಳಿಕೆ ಚುಚ್ಚುಮದ್ದು ಗುರಿ ತಪ್ಪಿತ್ತು. ಸಂಜೆ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಇಂದು ಕೊಂಬಾರು ಗ್ರಾಮದ ಬಾರ್ಯ ಸಮೀಪ ಕಾಡಿನಲ್ಲಿ ಆನೆ ಕಂಡುಬಂದ ಹಿನ್ನೆಲೆಯಲ್ಲಿ ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದರು. ಅಪರಾಹ್ನ ಕೊಂಬಾರು ಮಂಡೆಕರ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಕೊನೆಗೂ ಸೆರೆಹಿಡಿದಿದ್ದಾರೆ. ಕೋವಿಯಿಂದ ಸಿಡಿಸಿದ ಅರಿವಳಿಕೆ ಚುಚ್ಚುಮದ್ದಿನಿಂದಾಗಿ ಪ್ರಜ್ಞೆ ಕಳೆದುಕೊಂಡಿರುವ ಆನೆಯನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ಸೋಮವಾರದಂದು ಆನೆ ದಾಳಿ ನಡೆಸಿದ್ದು ಯುವತಿ ಸಹಿತ ಇಬ್ಬರು ಮೃತಪಟ್ಟಿದ್ದರು.

Ads on article

Advertise in articles 1

advertising articles 2

Advertise under the article