ಮಂಗಳೂರು: ಬಾವುಟಗುಡ್ಡೆಯ ಕಟ್ಟಡವೊಂದರಲ್ಲಿ ಬೆಂಕಿ ಅವಘಡ Fire Accidental
Tuesday, July 25, 2023
ಮಂಗಳೂರು: ನಗರದ ಬಾವುಟಗುಡ್ಡೆಯ ಇನ್ಶೂರೆನ್ಸ್ ಸಂಸ್ಥೆಯೊಂದರ ಕಚೇರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಕಂಪ್ಯೂಟರ್, ಎಸಿ ಮತ್ತಿತರ ವಸ್ತುಗಳು ಸುಟ್ಟುಹೋದ ಘಟನೆ ನಡೆದಿದೆ.
ಬಾವುಟಗುಡ್ಡೆಯ ಕೆಎಂಸಿ ದಂತವೈದ್ಯಕೀಯ ಕಾಲೇಜು ಎದುರುಗಡೆಯಿರುವ ಮ್ಯಾಕ್ಸಿಮಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಮೂರನೇ ಅಂತಸ್ತಿನಲ್ಲಿರುವ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪೆನಿಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ತಕ್ಷಣ ಪಾಂಡೇಶ್ವರ ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಸುಮಾರು ಎರಡು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಬೆಂಕಿ ಹೊರಗೆ ಹರಡಿಲ್ಲದ ಕಾರಣ ಯಾವುದೇ ದೊಡ್ಡ ಮಟ್ಟದ ಅನಾಹುತ, ಮತ್ತಿತರ ಹಾನಿ ಸಂಭವಿಸಿಲ್ಲ. ಆದರೆ ದಟ್ಟ ಹೊಗೆ ಆವರಿಸಿ ಆತಂಕ ಸೃಷ್ಟಿಯಾಗಿತ್ತು..