ಮಂಗಳೂರು: ಕುಣಿಯುತ್ತಿದ್ದಾಗಲೇ ಆಯತಪ್ಪಿ ಬಿದ್ದ ಹುಲಿವೇಷಧಾರಿ - ದೇವಿ ಸನ್ನಿಧಾನದಲ್ಲಿ ಪಾರಾದ ಯುವಕ
Monday, October 23, 2023
ಮಂಗಳೂರು: ಹುಲಿವೇಷ ಕುಣಿಯುತ್ತಿದ್ದಾಗಲೇ ಹುಲಿವೇಷಧಾರಿಯೊಬ್ಬ ಆಯತಪ್ಪಿ ಬಿದ್ದು ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಂಗಳೂರಿನ ಶ್ರೀಮಂಗಳಾದೇವಿ ದೇವಸ್ಥಾನದಲ್ಲಿ ನಡೆದಿದೆ.
ಮಂಗಳಾದೇವಿಯ ಮುಳಿಹಿತ್ಲುವಿನ ಎಂಎಫ್ ಸಿ ಹುಲಿವೇಷ ತಂಡದ ಹುಲಿವೇಷಧಾರಿ ಶಂಕರ್ ಎಂಬ ಯುವಕ ಹರಕೆಯ ಹಿನ್ನಲೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಎದುರು ಹುಲಿವೇಷ ಕುಣಿಯುತ್ತಿದ್ದರು. ಈ ವೇಳೆ ಜಿಮ್ನ್ಯಾಸ್ಟಿಕ್ ಮಾಡುತ್ತಿದ್ದರು. ಈ ವೇಳೆ ಅವರು ರಿವರ್ಸ್ ಪಲ್ಟಿ ಹೊಡೆಯುತ್ತಿದ್ದ ಸಂದರ್ಭ ಆಯತಪ್ಪಿ ತಲೆ ನೆಲಕ್ಕೆ ಬಡಿದಿದಿದೆ.
ತಲೆ ನೆಲಕ್ಕೆ ಬಡಿದ ಪರಿಣಾಮ ಹುಲಿವೇಷಧಾರಿ ಶಂಕರ್ ಕತ್ತು ಉಳುಕಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಸಣ್ಣ ಗಾಯದೊಂದಿಗೆ ಅಪಾಯದಿಂದ ಯುವಕ ಶಂಕರ್ ಪಾರಾಗಿದ್ದಾರೆ. ಅವರು ಆಯತಪ್ಪಿ ಬೀಳುತ್ತಿರುವ ವೀಡಿಯೋ ವೈರಲ್ ಆಗಿ ದೊಡ್ಡ ಏಟಾಗಿದೆ ಎಂದು ಪ್ರಚಾರವಾಗಿತ್ತು. ಈ ಹಿನ್ನಲೆಯಲ್ಲಿ ಶಂಕರ್ ಅವರೇ ವೀಡಿಯೋ ಮಾಡಿ ತನಗೇನು ಆಗಿಲ್ಲ ಎಂದು ತಿಳಿಸಿದ್ದಾರೆ.