ಮಂಗಳೂರು: ಜಾತಿಗಣತಿ ವಿಚಾರದಲ್ಲಿ ಸಿಎಂ - ಡಿಸಿಎಂ ಮಧ್ಯೆ ಯಾವುದೇ ಗೊಂದಲಗಳಿಲ್ಲ - ಸಚಿವ ಭೈರತಿ ಸುರೇಶ್
Friday, November 24, 2023
ಮಂಗಳೂರು: ಜಾತಿ ಗಣತಿ ವಿಚಾರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿ, ಜಾತಿ ಗಣತಿ ಅನ್ನುವುದು ಯಾರದ್ದೋ ಜಾತಿಯನ್ನು ಎತ್ತಿ ತೋರಿಸುವ ಉದ್ದೇಶ ಅಲ್ಲ. ಬೇರೆ ಬೇರೆ ಜಾತಿಯ ಆರ್ಥಿಕ ಸ್ಥಿತಿಗತಿ ತಿಳಿಯುವ ಉದ್ದೇಶದಿಂದ ಜಾತಿ ಗಣತಿ ಮಾಡಲಾಗಿದೆ. ಎಲ್ಲಾ ಜಾತಿಯವರನ್ನು, ಸಮಾಜವನ್ನು ಮೇಲೆ ಎತ್ತುವುದೇ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಸಿಎಂ, ಡಿಸಿಎಂ ಮಧ್ಯೆ ಈ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಜಾತಿ ಗಣತಿ ವರದಿ ತೆಗೊಂಡು ಸಾಧಕ ಬಾಧಕ ನೋಡಿ ಸರ್ಕಾರ ಅನುಮೋದನೆ ಮಾಡಲಿದೆ ಎಂದು ಹೇಳಿದರು.
ಸಚಿವ ಸಂಪುಟದಲ್ಲಿ ಡಿಕೆಶಿ ಸಿಬಿಐ ಕೇಸ್ ವಾಪಾಸ್ ಪಡೆದ ವಿಚಾರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿ, ಅಡ್ವಕೇಟ್ ಜನರಲ್ ಗೆ ಕಳೆದ ಬಾರಿ ಯಡಿಯೂರಪ್ಪ ಮೌಖಿಕ ಆದೇಶ ಕೊಟ್ಟಿದ್ದರು. ಆದರೆ ಮೌಖಿಕ ಆದೇಶ ಕೊಡೋದು ತಪ್ಪು ಅನ್ನೋದು ಆಗಿನ ಎಜಿ ಹಾಗೂ ಈಗಿನ ಎಜಿ ಶಶಿಕಿರಣ್ ಶೆಟ್ಟಿ ಅಭಿಪ್ರಾಯ. ಆ ಪ್ರಕಾರ ಈಗ ಕೊಟ್ಟ ಅನುಮತಿಯನ್ನು ವಾಪಾಸ್ ಪಡೆಯಲಾಗಿದೆ. ಆದರೆ ಸಿಬಿಐ ಸುಪ್ರೀಂ ಅಥವಾ ಹೈಕೋರ್ಟ್ ಹೋಗುವುದು ಅವರಿಗೆ ಬಿಟ್ಟಿದ್ದು ಎಂದರು.
ಆಗಿನ ಸರ್ಕಾರ ಮಾಡಿರೋದು ತಪ್ಪು ಎಂದು ಎಜಿ ವರದಿ ನೀಡಿದ್ದಾರೆ. ಆದ್ದರಿಂದ ಕ್ಯಾಬಿನೆಟ್ ಗೂ ಅದು ತಪ್ಪು ಎಂದು ಅನ್ನಿಸಿ ವಾಪಾಸ್ ತೆಗೊಂಡಿದೆ. ಬಿಜೆಪಿಯವರು ಪ್ರಾಮಾಣಿಕರಾಗಿದ್ದಲ್ಲಿ ಎಜಿಯವರನ್ನು ಕೇಳಿ ಕೊಡಬೇಕಿತ್ತು. ಆದರೆ ಎಜಿಯವರು ಅಭಿಪ್ರಾಯ ಕೊಡುವ ಮೊದಲೇ ಆಗಿನ ಸಿಎಂ ಸಿಬಿಐ ಕೊಟ್ಟಿದ್ದು ತಪ್ಪಲ್ವಾ?. ಅವರು ಪ್ರಾಮಾಣಿಕರಾಗಿದರೆ ಎಜಿ ಕೇಳಿ ಕೊಡಬೇಕಿತ್ತು ಎಂದರು.
ನಮ್ಮ ಪ್ರಾಮಾಣಿಕತೆ ಪ್ರಶ್ನೆ ಮಾಡುವ ಇವರು ಎಜಿಗೆ ಸಲಹೆಗಳನ್ನು ಕೇಳಬೇಕಿತ್ತು. ಈಗಿನ ಎಜಿ ಅದು ತಪ್ಪು ಎಂದಿರುವ ಕಾರಣಕ್ಕೆ ಕ್ಯಾಬಿನೆಟ್ ಈ ನಿರ್ಧಾರ ತೆಗೊಂಡಿದೆ. ಕಾಂಗ್ರೆಸ್ ಗೆ ಯಾರು ಬರ್ತಾರೆ, ಹೋಗ್ತಾರೆ ಎಂದು ನನಗೆ ಗೊತ್ತಿಲ್ಲ ಎಂದರು.
ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಚಾರದಲ್ಲಿ ಮಾತನಾಡಿದ ಭೈರತಿ ಸುರೇಶ್ ಅವರು, ವಿಜಯೇಂದ್ರ ಅಥವಾ ಯಾರೇ ಬಂದರೂ ಪಕ್ಷದಲ್ಲಿ ಬದಲಾವಣೆ ಆಗಲ್ಲ. ಕಾಂಗ್ರೆಸ್ ಗೆ ಬರುವರ ಸಂಖ್ಯೆಯೂ ಹೆಚ್ಚಾಗಿದೆ. ನಮ್ಮ ಸರ್ಕಾರವೂ ಸರಿಯಿದೆ. ಸೋಮಣ್ಣ ವಿಚಾರದಲ್ಲಿ ಮಾತುಕತೆ ಆಗುತ್ತಿದೆ ಏನಾಗಿದೆ ಗೊತ್ತಿಲ್ಲ ಎಂದರು.
ಬೈಟ್: ಭೈರತಿ ಸುರೇಶ್ - ನಗರಾಭಿವೃದ್ಧಿ ಸಚಿವ