ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಸಂತ್ರಸ್ತನಿಗೆ ಸಿಎಂ ಪರಿಹಾರ ನಿಧಿಯಿಂದ 2ಲಕ್ಷ ಚೆಕ್ - ಕುಕ್ಕರ್ ಒಳಗೆ ಬಾಂಬೇ ಇಲ್ವಂತೆ?
Wednesday, January 17, 2024
ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ನಿಂದ ಗಾಯಾಳುವಾಗಿದ್ದ ರಿಕ್ಷಾ ಡ್ರೈವರ್ ಪುರುಷೋತ್ತಮ ಪೂಜಾರಿಯವರಿಗೆ ಸಿಎಂ ಪರಿಹಾರ ನಿಧಿಯಿಂದ 2ಲಕ್ಷ ರೂ. ನೀಡಲಾಗಿದೆ. ದ.ಕ.ಜಿಲ್ಲಾಧಿಕಾರಿ ಖಾತೆಗೆ ಜ.1ರಂದು ಸಿಎಂ ಪರಿಹಾರ ನಿಧಿಯಿಂದ ಬಿಡುಗಡೆಯಾದ ಈ ಪರಿಹಾರ ಮೊತ್ತದ ಚೆಕ್ ಅನ್ನು ಪುರುಷೋತ್ತಮ ಪೂಜಗೆ ವಿತರಣೆ ಮಾಡಲಾಗಿದೆ.
ಪರಿಹಾರ ಚೆಕ್ ವಿತರಣೆ ಉದ್ದೇಶದಿಂದ ಸಿಎಂ ಪರಿಹಾರ ನಿಧಿಯಿಂದ ಸಿಎಂ ಜಂಟಿ ಕಾರ್ಯದರ್ಶಿ ಪಿ. ಗೋಪಾಲ್ ಆದೇಶ ಹೊರಡಿಸಿದ್ದಾರೆ. ಆದರೆ ಈ ಆದೇಶದಲ್ಲಿ ಕುಕ್ಕರ್ ಬಾಂಬ್ ಪ್ರಕರಣವನ್ನು ಸಾಮಾನ್ಯ ಘಟನೆಯೆಂಬಂತೆ ಬಿಂಬಿಸಲಾಗಿದೆ. ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್ ಭಯೋತ್ಪಾದಕ ಕೃತ್ಯ ಎಸಗಿರುವುದನ್ನು ಒಪ್ಪಿದ್ದಾನೆ. ಎನ್ಐಎ ಕೂಡಾ ಈತನ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಆದರೂ ಆದೇಶ ಪತ್ರದಲ್ಲಿ ಮೊಹಮ್ಮದ್ ಶಾರೀಕ್ ನನ್ನು ಸಾಮಾನ್ಯ ಪ್ರಯಾಣಿಕನಂತೆ ಬಿಂವ
ಬಿಸಲಾಗಿದೆ. ಕುಕ್ಕರ್ ಬಾಂಬ್ ಎಂದು ಬಿಂಬಸದೆ ಸಾಮಾನ್ಯ ಕುಕ್ಕರ್ ಸಿಡಿದಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಕುಕ್ಕರ್ ಬಾಂಬ್ ಪ್ರಕರಣವನ್ನೇ ರಾಜ್ಯ ಸರ್ಕಾರ ಸಾಮಾನ್ಯ ಘಟನೆಯೆಂಬಂತೆ ಬಿಂಬಿಸಲು ಹೊರಟಂತಿದೆ.
ಪುರುಷೋತ್ತಮ ಪೂಜಾರಿಯವರಿಗೆ ಸಿಎಂ ಪರಿಹಾರ ನಿಧಿಯಿಂದ ನೆರವು ನೀಡುವಂತೆ ಐವಾನ್ ಡಿಸೋಜ ಅವರು ಸಿಎಂ ಸಿದ್ದರಾಮಯ್ಯರಿಗೆ ಮನವಿ ನೀಡಿದ್ದರು. ಅದನ್ನು ಪರಿಗಣಿಸಿ ಸಿದ್ದರಾಮಯ್ಯ ಎರಡು ಲಕ್ಷ ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ. ಈ ಹಿಂದಿನ ಬಿಜೆಪಿ ಸರಕಾರದಿಂದ ಅವರಿಗೆ ಪರಿಹಾರದ ಮೊತ್ತ ಲಭಿಸಿರಲಿಲ್ಲ. ಶಾಸಕ ವೇದವ್ಯಾಸ ಕಾಮತ್ ತಮ್ಮ ವೈಯುಕ್ತಿಕ ಹಣದಿಂದ ಹೊಸದಾದ ಆಟೋ ರಿಕ್ಷಾ ಒದಗಿಸಿದ್ದರೆ, ಬಿಜೆಪಿ ಪಕ್ಷದಿಂದ ಐದು ಲಕ್ಷ ರೂ. ನೆರವು ನೀಡಲಾಗಿತ್ತು. ಆದರೆ ಬಿಜೆಪಿ ಸರಕಾರದಿಂದ ಪರಿಹಾರ ಮೊತ್ತ ಸಿಕ್ಕಿರಲಿಲ್ಲ. ಅವರ ಚಿಕಿತ್ಸಾ ವೆಚ್ಚವನ್ನೂ ಭರಿಸಿರಲಿಲ್ಲ.