ಉಡುಪಿ: ಮಹೇಶ್ ಆಸ್ಪತ್ರೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಿಂದ ಮತಯಾಚನೆ
Saturday, May 25, 2024
ಉಡುಪಿ: ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಪ್ರತಿಷ್ಠಿತ ಆಸ್ಪತ್ರೆ ಮಹೇಶ್ ಆಸ್ಪತ್ರೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರು ಮತಯಾಚನೆ ಮಾಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣರೊಂದಿಗೆ ಮಹೇಶ್ ಆಸ್ಪತ್ರೆಗೆ ಭೇಟಿ ನೀಡಿದ ಡಾ.ಧನಂಜಯ ಸರ್ಜಿಯವರು ಹೆಸರಾಂತ ಮಕ್ಕಳ ತಜ್ಞ ಮತ್ತು ಮಹೇಶ್ ಆಸ್ಪತ್ರೆಯ ವೈದಕೀಯ ನೀರ್ದೇಶಕ ಡಾ.ರಾಕೇಶ್ ಅಡಿಗ, ಆಡಳಿತ ವರ್ಗ, ಸಿಬ್ಬಂದಿ ವರ್ಗದವರಲ್ಲಿ ವಿಧಾನ ಪರಿಷತ್ ನ ನೈರುತ್ಯ ಪದವೀಧರರ ಚುನಾವಣೆಯಲ್ಲಿ ಗೆಲ್ಲಿಸಲು ತಮ್ಮನ್ನು ಬೆಂಬಲಿಸುವಂತೆ ಮತಯಾಚಿಸಿದರು.