ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ 11ನೇ ಸೀಸನ್ ಗೆ ಮತ್ತೊಂದು ಸಂಕಷ್ಟಸಾಗರ ನ್ಯಾಯಾಲಯದಿಂದ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋಗೆ ತುರ್ತು ನೋಟಿಸ್ ಜಾರಿ
Friday, October 18, 2024
ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ 11ನೇ ಸೀಸನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಾಗರ ನ್ಯಾಯಾಲಯದಿಂದ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ.
ಸಾಗರದ ಪ್ರಧಾನ ವ್ಯವಹಾರ ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಲಾಗಿದ್ದು, ಬಿಗ್ ಬಾಸ್ 11ನೇ ಸೀಸನ್ ಪ್ರಸಾರವನ್ನು ಕಾಯಂ ಆಗಿ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿದೆ.
ಸಾಗರದ ವಕೀಲ ಕೆ.ಎಲ್. ಭೋಜರಾಜ್ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ವ್ಯವಹಾರ ಪ್ರಕ್ರಿಯಾ ಸಂಹಿತೆ ಆದೇಶ 39 ನಿಯಮ 1 ಮತ್ತು 2 ರೆಡ್ ವಿತ್ ಸೆಕ್ಷನ್ 151ರ ಪ್ರಕಾರ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿಯ ವಿಚಾರಣೆ ಕೈಗೊಂಡಿರುವ ಕೋರ್ಟ್ ಈ ಹಿನ್ನೆಲೆಯಲ್ಲಿ ಸಿವಿಲ್ ಕಾರ್ಯವಿಧಾನದ ಕೋಡ್ ಕಾಯಿದೆ U/sec.26, Order7 rule1 ಅಡಿಯಲ್ಲಿ ನೋಟಿಸ್ ಜಾರಿ ಮಾಡಿದೆ. ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಪಕರು ಹಾಗೂ ಸಂಪಾದಕರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ.
ಅಕ್ಟೋಬರ್ 28 ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಇಂದಿಗೆ 19 ದಿನ ಕಳೆದಿರುವ ಬಿಗ್ ಬಾಸ್ 11ನೇ ಸೀಸನ್ ಇಂಟ್ರೆಸ್ಟಿಂಗ್ ಆಗಿಯೇ ಮೂಡಿ ಬರುತ್ತಿದೆ. ಆದರೆ ಶೋನಲ್ಲಿ ಆರಂಭದಿಂದಲೇ ಜಗಳ ಶುರುವಾಗಿದೆ. ಕಾರ್ಯಕ್ರಮದ ವಿರುದ್ಧ ಅನೇಕ ಆರೋಪಗಳೂ ಕೇಳಿ ಬಂದಿವೆ. .