ಕೊನೆಗೂ ಜೈಲು 'ದರ್ಶನ'ದಿಂದ ನಟ ದರ್ಶನ್ ಗೆ ಮುಕ್ತಿ ; ದೀಪಾವಳಿಗೆ ಸಿಕ್ತು ಮಧ್ಯಂತರ ಜಾಮೀನು ಭಾಗ್ಯ, ಸಿನಿಮಾ ಶೂಟಿಂಗ್ ಗೆ ಇಲ್ಲ ಅವಕಾಶ, ಪಾಸ್‌ಪೋರ್ಟ್ ವಶಕ್ಕೆ!

ಬೆಂಗಳೂರು, ಅ 30: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ನಾಲ್ಕು ತಿಂಗಳಿನಿಂದ ಜೈಲಿನಲ್ಲಿರುವ ನಟ ದರ್ಶನ್ ಗೆ ಮಧ್ಯಂತರ ಜಾಮೀನು ದೊರಕಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಆರು ವಾರಗಳ ಮಧ್ಯಂತರ ರಿಲೀಫ್ ನೀಡಿದೆ.

131 ದಿನಗಳಿಂದ ಜೈಲಿನಲ್ಲಿರುವ ದರ್ಶನ್ ಬುಧವಾರವೇ ಬಳ್ಳಾರಿ ಕಾರಾಗೃಹದಿಂದ ಹೊರಬರುವ ನಿರೀಕ್ಷೆ ಇದೆ. ಹೈಕೋರ್ಟ್ ಆದೇಶವು ಇಂದೇ ಬಳ್ಳಾರಿ ಜೈಲಿನ ಅಧಿಕಾರಿಗಳಿಗೆ ತಲುಪಿದರೆ, ಸಂಜೆ ವೇಳೆಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡರೆ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ದರ್ಶನ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ದರ್ಶನ್ 6 ವಾರಗಳ ಮಧ್ಯಂತರ ಜಾಮೀನು ತನಿಖಾ ಪ್ರಕ್ರಿಯೆಗೆ ಸಂಬಂಧಿಸಿದ ಅಂಶಗಳ ಆಧಾರದಲ್ಲಿ ದೊರಕಿಲ್ಲ. ಬದಲಾಗಿ ದರ್ಶನ್ ಅನಾರೋಗ್ಯ ಸಂಗತಿಯಿಂದ ಜೈಲಿನಿಂದ ಹೊರಬರಲು ನೆರವಾಗಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬ ಇತರರು ಬಳ್ಳಾರಿ ಜೈಲಿಗೆ ತೆರಳುವ ನಿರೀಕ್ಷೆ ಇದೆ. ದರ್ಶನ್ ಬೆನ್ನುಹುರಿ ಸಮಸ್ಯೆ ಇದ್ದು, ಆಪರೇಷನ್ ನಡೆಸಬೇಕಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ವಕೀಲರು ವಾದಿಸಿದ್ದರು. ದರ್ಶನ್ ಅವರ ವೈದ್ಯಕೀಯ ತಪಾಸಣೆ ವರದಿ ಸಲ್ಲಿಸುವಂತೆ ಜೈಲರ್‌ಗೆ ಕೋರ್ಟ್ ಸೂಚನೆ ನೀಡಿತ್ತು. ಮುಚ್ಚಿದ ಲಕೋಟೆಯಲ್ಲಿ ವೈದ್ಯಕೀಯ ವರದಿ ಸಲ್ಲಿಸಿದ್ದರು. ಅವರು ಆಸ್ಪತ್ರೆಗೆ ದಾಖಲಾಗುವುದು ಮತ್ತು ಪ್ರಾಥಮಿಕ ಚಿಕಿತ್ಸೆ ಕುರಿತು ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ದರ್ಶನ್ ಗೆ ಅನುಕೂಲವಾಗುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೈಕೋರ್ಟ್ ಅವಕಾಶ ನೀಡಿದೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಬೇಕಿದೆ ಎಂದು ವಕೀಲ ಸಿವಿ ನಾಗೇಶ್ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು.

ದರ್ಶನ್ ಅವರ ಪಾಸ್‌ಪೋರ್ಟ್ ವಶಕ್ಕೆ ನೀಡುವಂತೆ ಕೋರ್ಟ್ ಸೂಚಿಸಿದೆ. ಇದು ವೈದ್ಯಕೀಯ ಆಧಾರದಲ್ಲಿ ದೊರಕಿರುವ ಜಾಮೀನು. ಅವರ ರೆಗ್ಯುಲರ್ ಬೇಲ್‌ಗೆ ಬೇಕಾಗಿರುವ ಸಿದ್ಧತೆಗಳನ್ನು ಮುಂದುವರಿಸುತ್ತೇವೆ ಎಂದು ವಕೀಲ ಸುನಿಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೋರ್ಟ್ ವಿಧಿಸಿರುವ ಷರತ್ತುಗಳು ಇನ್ನೂ ಬಹಿರಂಗವಾಗಿಲ್ಲ.

ಕೊನೆಗೂ ಜೈಲು 'ದರ್ಶನ'ದಿಂದ ನಟ ದರ್ಶನಗೆ ಮುಕ್ತಿ ; ದೀಪಾವಳಿಗೆ ಸಿಕ್ತು ಮಧ್ಯಂತರ ಜಾಮೀನು ಭಾಗ್ಯ, ಸಿನಿಮ ಶೂಟಿಂಗ್ ಗೆ ಇಲ್ಲ ಅವಕಾಶ, ಪಾಸ್‌ಪೋರ್ಟ್ ವಶಕ್ಕೆ ! 

ಬೆಂಗಳೂರು, ಅ 30: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ನಾಲ್ಕು ತಿಂಗಳಿನಿಂದ ಜೈಲಿನಲ್ಲಿರುವ ನಟ ದರ್ಶನ್ ಗೆ ಮಧ್ಯಂತರ ಜಾಮೀನು ದೊರಕಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಆರು ವಾರಗಳ ಮಧ್ಯಂತರ ರಿಲೀಫ್ ನೀಡಿದೆ.

131 ದಿನಗಳಿಂದ ಜೈಲಿನಲ್ಲಿರುವ ದರ್ಶನ್ ಬುಧವಾರವೇ ಬಳ್ಳಾರಿ ಕಾರಾಗೃಹದಿಂದ ಹೊರಬರುವ ನಿರೀಕ್ಷೆ ಇದೆ. ಹೈಕೋರ್ಟ್ ಆದೇಶವು ಇಂದೇ ಬಳ್ಳಾರಿ ಜೈಲಿನ ಅಧಿಕಾರಿಗಳಿಗೆ ತಲುಪಿದರೆ, ಸಂಜೆ ವೇಳೆಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡರೆ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ದರ್ಶನ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ದರ್ಶನ್ 6 ವಾರಗಳ ಮಧ್ಯಂತರ ಜಾಮೀನು ತನಿಖಾ ಪ್ರಕ್ರಿಯೆಗೆ ಸಂಬಂಧಿಸಿದ ಅಂಶಗಳ ಆಧಾರದಲ್ಲಿ ದೊರಕಿಲ್ಲ. ಬದಲಾಗಿ ದರ್ಶನ್ ಅನಾರೋಗ್ಯ ಸಂಗತಿಯಿಂದ ಜೈಲಿನಿಂದ ಹೊರಬರಲು ನೆರವಾಗಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬ ಇತರರು ಬಳ್ಳಾರಿ ಜೈಲಿಗೆ ತೆರಳುವ ನಿರೀಕ್ಷೆ ಇದೆ. ದರ್ಶನ್ ಬೆನ್ನುಹುರಿ ಸಮಸ್ಯೆಯಿಂದ ಬಳಲುತಿದ್ದು , ಆಪರೇಷನ್ ನಡೆಸಬೇಕಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ವಕೀಲರು ವಾದಿಸಿದ್ದರು. ದರ್ಶನ್ ಅವರ ವೈದ್ಯಕೀಯ ತಪಾಸಣೆ ವರದಿ ಸಲ್ಲಿಸುವಂತೆ ಜೈಲರ್‌ಗೆ ಕೋರ್ಟ್ ಸೂಚನೆ ನೀಡಿತ್ತು. ಮುಚ್ಚಿದ ಲಕೋಟೆಯಲ್ಲಿ ವೈದ್ಯಕೀಯ ವರದಿ ಸಲ್ಲಿಸಿದ್ದರು. ಅವರು ಆಸ್ಪತ್ರೆಗೆ ದಾಖಲಾಗುವುದು ಮತ್ತು ಪ್ರಾಥಮಿಕ ಚಿಕಿತ್ಸೆ ಕುರಿತು ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ದರ್ಶನ್ ಗೆ ಅನುಕೂಲವಾಗುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೈಕೋರ್ಟ್ ಅವಕಾಶ ನೀಡಿದೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಬೇಕಿದೆ ಎಂದು ವಕೀಲ ಸಿವಿ ನಾಗೇಶ್ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು.

ದರ್ಶನ್ ಅವರ ಪಾಸ್‌ಪೋರ್ಟ್ ವಶಕ್ಕೆ ನೀಡುವಂತೆ ಕೋರ್ಟ್ ಸೂಚಿಸಿದೆ. ಇದು ವೈದ್ಯಕೀಯ ಆಧಾರದಲ್ಲಿ ದೊರಕಿರುವ ಜಾಮೀನು. ಅವರ ರೆಗ್ಯುಲರ್ ಬೇಲ್‌ಗೆ ಬೇಕಾಗಿರುವ ಸಿದ್ಧತೆಗಳನ್ನು ಮುಂದುವರಿಸುತ್ತೇವೆ ಎಂದು ವಕೀಲ ಸುನಿಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೋರ್ಟ್ ವಿಧಿಸಿರುವ ಷರತ್ತುಗಳು ಇನ್ನೂ ಬಹಿರಂಗವಾಗಿಲ್ಲ.

Ads on article

Advertise in articles 1

advertising articles 2

Advertise under the article