ಮುಂಬೈ:ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರ ದುರ್ಮರಣ;  ಮುಂಬೈನ ಉಲ್ವೆಯಲ್ಲಿ ನಡೆದ ಘಟನೆ .

ಮುಂಬೈ:ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರ ದುರ್ಮರಣ; ಮುಂಬೈನ ಉಲ್ವೆಯಲ್ಲಿ ನಡೆದ ಘಟನೆ .


ಮುಂಬೈ: ಸಿಲಿಂಡರ್ ಸ್ಪೋಟಿಸಿ ಮೂವರು ಸಾವನ್ನಪ್ಪಿರುವ ಘಟನೆ ಮುಂಬೈನ ಉಲ್ವೆಯಲ್ಲಿ ನಡೆದಿದೆ.

ಜನರಲ್ ಸ್ಟೋರ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ನಂತರ ನವಿ ಮುಂಬೈನ ಉಲ್ವೆ ನಗರ ಪ್ರದೇಶದಲ್ಲಿನ ಅಂಗಡಿಯ ಮಾಲೀಕರ ನಿವಾಸಕ್ಕೂ ಬೆಂಕಿ ತಗುಲಿತು. ಇದರಲ್ಲಿ ಅಂಗಡಿ ಮಾಲೀಕನ ಹೆಂಡತಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮಾಲೀಕನಿಗೆ ಗಾಯಗಳಾಗಿವೆ. ಅಂಗಡಿ ಮಾಲೀಕನನ್ನ ರಮೇಶ್ ಎಂದು ಗುರುತಿಸಲಾಗಿದೆ.

ಅಂಗಡಿಯಲ್ಲಿ ಮೂರು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡು ಅಂಗಡಿ ಮತ್ತು ನಿವಾಸಕ್ಕೆ ಬೆಂಕಿ ತಗುಲಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, 5 ಕೆಜಿಯ ಎರಡು ಸಣ್ಣ ಸಿಲಿಂಡರ್ ಮತ್ತು 12 ಕೆಜಿ ಸಿಲಿಂಡರ್ ಸ್ಫೋಟಗೊಂಡಿದೆ.

ರಮೇಶ್ ಗಾಯಗೊಂಡಿದ್ದು, ಪ್ರಸ್ತುತ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿ ಶಾಮಕ ವಾಹನಗಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿಸಿದ್ದಾರೆ

Ads on article

Advertise in articles 1

advertising articles 2

Advertise under the article