ಮುಂಬೈ :ಭಾರತದ ಅಗ್ರಗಣ್ಯ ಉದ್ಯಮಿ ರತನ್ ಟಾಟಾ ನಿಧನ, ಬಡವಾದ ಉದ್ಯಮ ವಲಯ, ಕಂಬನಿ ಮಿಡಿದ ಗಣ್ಯರು

ಮುಂಬೈ :ಭಾರತದ ಅಗ್ರಗಣ್ಯ ಉದ್ಯಮಿ ರತನ್ ಟಾಟಾ ನಿಧನ, ಬಡವಾದ ಉದ್ಯಮ ವಲಯ, ಕಂಬನಿ ಮಿಡಿದ ಗಣ್ಯರು

 
ಮುಂಬೈ:ಭಾರತದ ಅಗ್ರಗಣ್ಯ ಉದ್ಯಮಿ 
ರತನ್ ಟಾಟಾ ಇನ್ನಿಲ್ಲ.. ಈ ಸುದ್ದಿ ಕೇಳಿದ ಪ್ರತಿಯೊಬ್ಬ ಭಾರತೀಯರ ಎದೆಯಲ್ಲಿ ಈಗ ನೋವು ಶುರುವಾಗಿದೆ. ರತನ್ ಟಾಟಾ ಅವರ ಸಾವಿನ ಸುದ್ದಿ ಇದೀಗ ಜಗತ್ತಿನಾದ್ಯಂತ ಕಿಚ್ಚು ಹೊತ್ತಿಸಿದೆ. ದೇಶದ ಉದ್ಯಮ ವಲಯಕ್ಕೆ ದೊಡ್ಡ ಸೇವೆ ಸಲ್ಲಿಸಿ, ತಮ್ಮ ಇಡೀ ಜೀವನವನ್ನೇ ಮುಡಿಪಾಗಿ ಇಟ್ಟಿದ್ದ ವ್ಯಕ್ತಿ ಇಂದು ಶತಕೋಟಿ ಭಾರತೀಯರನ್ನು ಬಿಟ್ಟು ಹೋಗಿದ್ದಾರೆ. ಈ ಮೂಲಕ ಭಾರತೀಯ ಉದ್ಯಮ ವಲಯವು ಇದೀಗ, ರತನ್ ಟಾಟಾ ಅವರ ನಿಧನದ ಸುದ್ದಿ ಕೇಳಿ ನಲುಗಿ ಹೋಗಿದೆ.
ಭಾರತೀಯರ ಪಾಲಿಗೆ ರತನ್ ಟಾಟಾ ಅವರು ಎಂದೆಂದಿಗೂ ಲೆಜೆಂಡ್.  ರತನ್ ಟಾಟಾ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. ರತನ್ ಟಾಟಾ ಅವರ ಅಭಿಮಾನಿಗಳಿಗೆ ತೀವ್ರ ಆಘಾತವೇ ಎದುರಾಗಿದೆ. ಭಾರತದಲ್ಲಿ ಉದ್ಯಮ ವಲಯವನ್ನು ಜಗತ್ತಿನ ಮಟ್ಟದಲ್ಲಿ ಎದ್ದು ನಿಲ್ಲುವಂತೆ ಬೆಳೆಸಿ, ಭಾರತದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ ರತನ್ ಟಾಟಾ ಅವರು ಶತಕೋಟಿ ಭಾರತೀಯರ ಆರಾಧ್ಯ ದೈವವೇ ಆಗಿದ್ದರು.

ರತನ್ ಟಾಟಾ ಸಮಾಜದ ಒಳಿತಿಗಾಗಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ, ಯಾಕೆ ಅಂದರೆ ರತನ್ ಟಾಟಾ ಅವರು ಕಟ್ಟುತ್ತಿದ್ದ ಪ್ರತಿಯೊಂದು ಉದ್ಯಮದಲ್ಲೂ ಸಮಾಜ ಸೇವೆಗೆ ಬೇಕಾಗಿದ್ದ ವಿಚಾರಗಳು ಇರುತ್ತಿದ್ದವು. ಹೀಗಿದ್ದರೂ ರತನ್ ಟಾಟಾ ಅವರು ಕೋಟಿ ಕೋಟಿ ರೂಪಾಯಿ ದಾನ ಮಾಡಿ ಮಾದರಿ ಆಗಿದ್ದರು.
ಜಗತ್ತಿಗೇ ಆಘಾತದ ಸಿಡಿಲು ಬಡಿದಿದೆ
ರತನ್ ಟಾಟಾ ಅವರ ಆರೋಗ್ಯದ ಬಗ್ಗೆ ಸಾಕಷ್ಟು ಊಹಾಪೋಹ & ಸುಳ್ಳು ಸುದ್ದಿಗಳು ಓಡಾಡುತ್ತಿವೆ ಎಂಬ ಆಕ್ರೋಶ ಕೇಳಿಬಂದಿತ್ತು. ಅಲ್ಲದೆ ಈ ಕುರಿತು ಖುದ್ದು ರತನ್ ಟಾಟಾ ಅವರೇ ಒಂದು ಸಂದೇಶ ನೀಡಿ, ನಾನು ಚೆನ್ನಾಗಿದ್ದೀನಿ. ನನ್ನ ಆರೋಗ್ಯವು ಚೆನ್ನಾಗಿ ಇದೆ. ನನಗೆ ವಯೋಸಹಜ ವೈದ್ಯಕೀಯ ಪರೀಕ್ಷೆಗಳು ಇರುವ ಕಾರಣ ಆಸ್ಪತ್ರೆಯಲ್ಲಿ ಪರೀಕ್ಷೆಗಾಗಿ ಬಂದಿದ್ದೇನೆ ಎಂದು ತಿಳಿಸಿದ್ದರು. ಆ ನಂತರ ರತನ್ ಟಾಟಾ ಅವರ ಫ್ಯಾನ್ಸ್ & ಶತಕೋಟಿ ಭಾರತೀಯರು ನಿಟ್ಟುಸಿರು ಬಿಟ್ಟಿದ್ದರು. ಹೀಗಿದ್ದಾಗಲೇ ಅಕ್ಟೋಬರ್ 9ರ ಬುಧವಾರ ಭಾರತದ ಉದ್ಯಮ ವಲಯಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಆಘಾತದ ಸಿಡಿಲು ಬಡಿದಿದೆ.

ಕಂಬನಿ ಮಿಡಿದ ಗಣ್ಯರು...
ರತನ್ ಟಾಟಾ ಅವರ ಹೆಸರು ಭೂಮಿ ಇರುವವರೆಗೂ, ಮನುಷ್ಯರು ಮತ್ತು ಮನುಷ್ಯತ್ವ ಇರುವ ತನಕವೂ ಬದುಕಿ ಉಳಿಯಲಿದೆ ಎಂಬುದು ಅವರ ಅಭಿಮಾನಿಗಳ ಮಾತು. ಯಾಕಂದ್ರೆ ಆ ರೀತಿಯ ದಾನ,ಧರ್ಮದ ಕಾರ್ಯಗಳನ್ನ ರತನ್ ಟಾಟಾ ಮಾಡಿದ್ದಾರೆ. ಇದೇ ಕಾರಣಕ್ಕೆ, ರತನ್ ಟಾಟಾ ಅವರ ಬದುಕನ್ನು ಕೋಟ್ಯಂತರ ಯುವಕರು ಫಾಲೋ ಮಾಡುತ್ತಿದ್ದಾರೆ. ಈ ರೀತಿ ಜಗತ್ತಿಗೇ ಮಾದರಿ ಆಗಿದ್ದ ಉದ್ಯಮಿ ರತನ್ ಟಾಟಾ ಅವರ ಅಗಲಿಕೆ ಇಡೀ ಜಗತ್ತಿನಲ್ಲೇ ನೋವು ತರಿಸಿದೆ. ರತನ್ ಟಾಟಾ ಅವರ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.

Ads on article

Advertise in articles 1

advertising articles 2

Advertise under the article