ಮಂಗಳೂರು:ನಂತೂರ್ ಜಂಕ್ಷನ್ ಬಳಿ ಸ್ಕೂಟಿಗೆ ಡಿಕ್ಕಿ ಹೊಡೆದ ಮೀನಿನ ಕಂಟೆನರ್; ಸ್ಕೂಟಿ ಚಲಾಯಿಸುತ್ತಿದ್ದ ಯುವತಿ ಸ್ಥಳದಲ್ಲಿಯೇ ಮೃತ್ಯು
Sunday, October 20, 2024
ಮಂಗಳೂರು : ಮಂಗಳೂರು ನಗರದ ನಂತೂರು ಜಂಕ್ಷನ್ ಬಳಿ ನಡೆದ ವಾಹನ ಅಪಘಾತದಲ್ಲಿ ಯುವತಿಯೊಬ್ಬಳು ದಾರುಣ ಅಂತ್ಯ ಕಂಡಿದ್ದಾಳೆ. ಮೃತಳನ್ನು ನಗರದ ಕೋಡಿಕಲ್‌ನ 27 ವರ್ಷದ ಕ್ರಿಸ್ತಿ ಕ್ರಾಸ್ತಾ ಎಂದು ಗುರುತಿಸಲಾಗಿದೆ.
ಇಂದು ಅಪರಾಹ್ನ 3.30 ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು ಕೋಡಿಕಲ್ ನಿವಾಸಿಯಾಗಿರುವ ಕುಮಾರಿ ಕ್ರಿಸ್ತಿ ಕ್ರಾಸ್ತಾ ರವರು ನಂತೂರು ಜಂಕ್ಷನ್ ನಿಂದ ಪಂಪ್ ವೆಲ್ ಕಡೆಗೆ ಹೋಗುತ್ತಿರುವಾಗ ನಂತೂರು ಜಂಕ್ಷನ್ ಬಳಿ ಶಾಂತಿ ಕಿರಣ ಬಿಲ್ಡಿಂಗಿನ ಎದುರು ಕೆ ಎಲ್ 11 ಬಿವಿ 4718 ನಂಬರಿನ ಹಸಿ ಮೀನು ಸಾಗಿಸುವ ಕಂಟೇನರ್ ವಾಹನವು ಕ್ರಿಸ್ತಿ ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು ಈ ಸಂದರ್ಭ ಯುವತಿ ಕಂಟೇನರ್ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ . ಕಂಟೇನರ್ ವಾಹನ ಚಾಲಕನ ನಿರ್ಲಕ್ಷದ ಚಾಲನೆಯೇ ಘಟನೆಗೆ ಕಾರಣವೆಂದು ಹೇಳಲಾಗಿದೆ. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ