ಮಂಡ್ಯ: ದೇವಸ್ಥಾನದ ಗೇಟ್ ಮೈಮೇಲೆ ಬಿದ್ದು 5 ವರ್ಷದ ಮಗು ಸಾವು;ದೇವಸ್ಥಾನ ಹಾಗೂ ಮುಜರಾಯಿ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಬಾಲಕನ ಪೋಷಕರು ಹಾಗೂ ಗ್ರಾಮಸ್ಥರ ಆಕ್ರೋಶ
Tuesday, November 12, 2024
ಮಂಡ್ಯ: ದೇವಸ್ಥಾನದ ಗೇಟ್ ಮೈಮೇಲೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಗ್ರಾಮದ ಚೆನ್ನಕೇಶವ ದೇಗುಲದಲ್ಲಿ ನಡೆದಿದೆ. ಗ
ಸೋಮವಾರ ಕಾರ್ತಿಕ ಮಾಸ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಗ್ರಾಮದ ಚೆನ್ನಕೇಶವ ದೇಗುಲಕ್ಕೆ ತೆರಳಿದ್ದರು. ಈ ವೇಳೆ ದೇಗುಲದ ಗೇಟ್ ಮಗು ಜಿಷ್ಣು ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದ. ತಕ್ಷಣ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಇಂದು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಜರಾಯಿ ಇಲಾಖೆಗೆ ಸೇರಿರುವ ಚೆನ್ನಕೇಶವ ದೇಗುಲದ ಗೇಟ್ ಮುರಿದು ಬಹಳ ದಿನಗಳಾದರೂ ದುರಸ್ಥಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಮುಜರಾಯಿ ಇಲಾಖೆ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಮುಜರಾಯಿ ಇಲಾಖೆ ವಿರುದ್ಧ ಪೋಷಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ