ಕನ್ನಡಿಯೆದುರು ನಿಂತು ತನಗೆ ತಾನೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ! ಅಚ್ಚರಿ ಮೂಡಿಸಿದ ಚೈತ್ರಾ ವರ್ತನೆ, ವಿಡಿಯೋ ನೋಡಿ
Thursday, November 7, 2024
ಬಿಗ್ ಬಾಸ್ ಕನ್ನಡ 11ನೇ ಸೀಸನ್ ಐದನೇ ವಾರಕ್ಕೆ ಕಾಲಿಟ್ಟಿದ್ದು, ಮನರಂಜನೆ ಹಾಗೂ ಸ್ಪರ್ಧಿಗಳ ವಿಚಿತ್ರ ವರ್ತನೆಗಳಿಂದ ಗಮನ ಸೆಳೆಯುತ್ತಿದೆ.
ಬಿಗ್‌ಬಾಸ್ ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಚೈತ್ರಾ ಕುಂದಾಪುರ ತನ್ನ ಅಚ್ಚರಿಯ ವರ್ತನೆಯ ಮೂಲಕ ಬಿಗ್ ಬಾಸ್ ಸಹ ಸ್ಪರ್ಧಿಗಳಿಗೆ ಹಾಗೂ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ.
ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ಮನೆಯ ಒಂದೊಂದು ಕಡೆ ಇದ್ದರು. ಚೈತ್ರಾ ಕುಂದಾಪುರ ಆಗ ತಾನೇ ಸ್ನಾನ ಮಾಡಿ ದೇವರ ವಿಗ್ರಹಕ್ಕೆ ಪೂಜೆ ಮಾಡಿದ್ದಾರೆ.
ಅಷ್ಟೇ ಅಲ್ಲ, ದೇವರ ಪೂಜೆ ಬಳಿಕ ತಮಗೆ ತಾವೇ ಪೂಜೆ ಮಾಡಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಅವರು ತನಗೆ ತಾನೇ ಪೂಜೆ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೊದಲು ಮನೆಯಲ್ಲಿರುವ ದೇವಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಚೈತ್ರಾ ನಂತರ ಅಲ್ಲೇ ಪಕ್ಕದಲ್ಲಿದ್ದ ಕನ್ನಡಿಯ ಬಳಿ ಬಂದು ಅಗರಬತ್ತಿ ಮತ್ತು ಗಂಟೆ ಅಲ್ಲಾಡಿಸಿ ತನಗೆ ತಾನೇ ಆರತಿ ಮಾಡಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಹೀಗೆ ಮಾಡುತ್ತಿದ್ದುದನ್ನು ಅಡುಗೆ ಮನೆಯಲ್ಲಿದ್ದ ಶಿಶಿರ್ ಅಚ್ಚರಿಯಿಂದ ನೋಡಿದ್ದಾರೆ.
ಚೈತ್ರಾ ಕುಂದಾಪುರ ತನಗೆ ತಾನೇ ಪೂಜೆ ಮಾಡಿಕೊಂಡ ಬಳಿಕ ಆ ಅಗರಬತ್ತಿಯನ್ನು ಅಲ್ಲೇ ಮುರಿದು ಹಾಕಿದ್ದಾರೆ. ಸದ್ಯ ಚೈತ್ರಾ ಕುಂದಾಪುರ ಮಾಡಿದ ಈ ವಿಚಿತ್ರ ಪೂಜೆ ಈಗ ಸುದ್ದಿಯಾಗುತ್ತಿದೆ.
ಇನ್ನು, ಬಿಗ್ ಬಾಸ್ ಮನೆಯಲ್ಲಿ ಬಗೆ ಬಗೆ ಟಾಸ್ಕ್ ನೀಡಲಾಗುತ್ತಿದೆ. ಗೆದ್ದವರಿಗೆ ಸೋತವರು ಸೇವೆ ಮಾಡುವ ಶಿಕ್ಷೆ ಕೂಡ ಕೊಡಲಾಗುತ್ತಿದೆ. ಹಾಗೆ ಮನೆಯಲ್ಲಿ ಹಳದಿ, ಕೆಂಪು, ನೀಲಿ, ಹಸಿರು ಹೀಗೆ ನಾಲ್ಕು ತಂಡಗಳನ್ನು ಮಾಡಲಾಗಿದೆ. ಇದೀಗ ಹಳದಿ ತಂಡಕ್ಕೆ ಹಸಿರು ತಂಡ ಸೇವೆ ಮಾಡಬೇಕಿದೆ. ಉಗ್ರಂ ಮಂಜು ಮತ್ತು ಗೋಲ್ಡ್ ಸುರೇಶ್ ಇಲ್ಲಿ ಸೀರೆಯುಟ್ಟುಕೊಂಡು ಹೆಣ್ಣು ವೇಷಧಾರಿಗಳೂ ಆಗಿದ್ದಾರೆ. ಡ್ಯಾನ್ಸ್ ಮಾಡೋ ಮೂಲಕ ಹಳದಿ ತಂಡಕ್ಕೆ ಮನರಂಜನೆ ನೀಡುತ್ತಿದ್ದಾರೆ.