ಬೆಂಗಳೂರು:ಮದ್ಯ ಸೇವಿಸಿ  ಹೀಯಾಳಿಸುತ್ತಿದ್ದ ಸಹೋದ್ಯೋಗಿಗಳ ಹತ್ಯೆ:  ಆರೋಪಿಯನ್ನು ಬಂಧಿಸಿದ  ಪೊಲೀಸರು.

ಬೆಂಗಳೂರು:ಮದ್ಯ ಸೇವಿಸಿ ಹೀಯಾಳಿಸುತ್ತಿದ್ದ ಸಹೋದ್ಯೋಗಿಗಳ ಹತ್ಯೆ: ಆರೋಪಿಯನ್ನು ಬಂಧಿಸಿದ ಪೊಲೀಸರು.

ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಸ್ ಸರ್ವಿಸ್ ಶೆಡ್​ನಲ್ಲಿ ಕೆಲಸ ಮಾಡುತಿದ್ದ ಸುರೇಶ್ ಬಂಧಿತ ಆರೋಪಿ.

ನವೆಂಬರ್ 8ರಂದು ರಾತ್ರಿ ಬಾಗಲೂರು ವ್ಯಾಪ್ತಿಯ ಸಿಂಗಹಳ್ಳಿ ಗ್ರಾಮದ ಬಳಿಯ ಶೆಡ್​​ನಲ್ಲಿ ನಾಗೇಶ್ (55) ಮತ್ತು ಮಂಜುನಾಥ್ (50) ಎಂಬಿಬ್ಬರನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಹತ್ಯೆ ಮಾಡಲಾಗಿತ್ತು.

ಹತ್ಯೆಯಾದ ನಾಗೇಶ್, ಮಂಜುನಾಥ್ ಹಾಗೂ ಆರೋಪಿ ಸುರೇಶ್ ಬಸ್ ಸರ್ವಿಸ್ ಶೆಡ್​ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಸುರೇಶನನ್ನು ನಿಂದಿಸುತ್ತಿದ್ದ ನಾಗೇಶ್ ಮತ್ತು ಮಂಜುನಾಥ್ ಕುಡಿದ ಮತ್ತಿನಲ್ಲಿ, ''ನೀನೊಬ್ಬ ಕಳ್ಳ, ನಿನ್ನ ಮೇಲೆ ಪ್ರಕರಣಗಳಿವೆ'' ಎಂದು ಹೀಯಾಳಿಸುತ್ತಿದ್ದರು. ಶುಕ್ರವಾರ ರಾತ್ರಿಯೂ ಸಹ ಕುಡಿದ ಮತ್ತಿನಲ್ಲಿ ನಿಂದಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಕಬ್ಬಿಣದ ಸಲಾಕೆಯಿಂದ ಇಬ್ಬರ ತಲೆಗೆ ಹೊಡೆದು ಹತ್ಯೆಗೈದಿದ್ದ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆರೋಪಿ ನಾಪತ್ತೆಯಾಗಿರುವುದು ಗೊತ್ತಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹತ್ಯೆಯ ಹಿಂದಿನ ಕಾರಣ ಬಾಯ್ಬಿಟ್ಟಿದ್ದಾನೆ ಎಂದು ಬಾಗಲೂರು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article