ಚಲಿಸುತ್ತಿದ್ದ ಸ್ಕೂಟಿ ಮೇಲೆ ಏಕಾಏಕಿ ಮರ ಬಿದ್ದು ಸವಾರ ಸಾವು!
Saturday, November 2, 2024
ದಕ್ಷಿಣ ಕನ್ನಡ: ಚಲಿಸುತ್ತಿದ್ದ ಸ್ಕೂಟಿ ಮೇಲೆ ಏಕಾಏಕಿ ಮರ ಬಿದ್ದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಪಂಜ ಕಡಬ ರಸ್ತೆಯ ಕೋಡಿಂಬಾಳ ಸಮೀಪದ ಪುಳಿಕುಕ್ಕು ಎಂಬಲ್ಲಿ ಶನಿವಾರ ನಡೆದಿದೆ. ಸುಬ್ಬಣ ಗೌಡ ಎಂಬವರ ಮಗ ಸೀತಾರಾಮ (58) ಮೃತ ಸವಾರ.
ಸೀತಾರಾಮ ಕಡಬದಿಂದ ಮನೆಗೆ ಬರುತ್ತಿದ್ದರು. ಈ ವೇಳೆ ಏಕಾಏಕಿ ಧೂಪದ ಮರ ಅವರ ಮೇಲೆಯೇ ಬಿದ್ದಿದೆ. ಬಿದ್ದ ರಭಸಕ್ಕೆ ಅವರು ಸ್ಧಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಮೃತ ಸೀತಾರಾಮ ಅವರು ಎಡಮಂಗಲ ಸೊಸೈಟಿಯ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮನೆಯಲ್ಲಿ ಹರಕೆಗೆ ಕೋಳಿ ತರುತ್ತಿರುವಾಗ ಈ ಘಟನೆ ಸಂಭವಿಸಿದೆ. ಅರಣ್ಯ ಇಲಾಖೆಯ ಅಸಡ್ಡೆ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ