ಧರ್ಮಸ್ಥಳ ಬಳಿ ನದಿಗೆ ಹಾರಿ ಕೋಲಾರ ಮೂಲದ ದಂಪತಿ ಆತ್ಮಹತ್ಯೆ ; ಎರಡು ದಿನ ಬಳಿಕ ಶವ ಪತ್ತೆ

ಧರ್ಮಸ್ಥಳ ಬಳಿ ನದಿಗೆ ಹಾರಿ ಕೋಲಾರ ಮೂಲದ ದಂಪತಿ ಆತ್ಮಹತ್ಯೆ ; ಎರಡು ದಿನ ಬಳಿಕ ಶವ ಪತ್ತೆ


ಕೋಲಾರ ಜಿಲ್ಲೆಯ ಚಿಂತಾಮಣಿಯಿಂದ ಅಕ್ಟೋಬರ್‌ 31ರಂದು ಕಾಣೆಯಾಗಿದ್ದ ದಂಪತಿ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ದೊಂಡೋಲೆ ಪವರ್ ಪ್ರಾಜೆಕ್ಟ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಬೆಳ್ತಂಗಡಿ, ನ.3: ಕೋಲಾರ ಜಿಲ್ಲೆಯ ಚಿಂತಾಮಣಿಯಿಂದ ಅಕ್ಟೋಬರ್‌ 31ರಂದು ಕಾಣೆಯಾಗಿದ್ದ ದಂಪತಿ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ದೊಂಡೋಲೆ ಪವರ್ ಪ್ರಾಜೆಕ್ಟ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ದಂಪತಿಯನ್ನು ಚಿಂತಾಮಣಿ ತಾಲೂಕಿನ ಮದ್ದಿರೆಡ್ಡಿ (61) ಮತ್ತು ಈಶ್ವರಮ್ಮ (52) ಎಂದು ಗುರುತಿಸಲಾಗಿದೆ. 

ಊರಿನಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದ ದಂಪತಿ ನಾಪತ್ತೆಯಾಗಿದ್ದಾಗಿ ಸುದ್ದಿ ಹಬ್ಬಿತ್ತು. ಅನುಮಾನಗೊಂಡ ಕುಟುಂಬಸ್ಥರು ಧರ್ಮಸ್ಥಳಕ್ಕೆ ಬಂದಿದ್ದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸಂಶಯದಲ್ಲಿ‌‌ ಹುಡುಕಾಟ ನಡೆಸಿದ್ದರು. ಬೆಳ್ತಂಗಡಿಯ ಶೌರ್ಯ ತಂಡ ಹಾಗೂ ಪೊಲೀಸರ ಸಹಕಾರದಲ್ಲಿ ನೇತ್ರಾವತಿ ಸ್ನಾನಘಟ್ಟ ಸೇರಿದಂತೆ ನದಿಯಲ್ಲಿ ಉದ್ದಕ್ಕೂ ಹುಡುಕಾಟ ನಡೆದಿತ್ತು.

ಭಾನುವಾರ ಮಧ್ಯಾಹ್ನ ದೊಂಡೋಲೆ ಬಳಿಯ ಪವರ್ ಪ್ರಾಜೆಕ್ಟ್‌ ಅಣೆಕಟ್ಟಿನಲ್ಲಿ ಶವಗಳು ಸಿಲುಕಿಕೊಂಡಿದ್ದು ಪತ್ತೆಯಾಗಿದೆ. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಉಜಿರೆ, ವೇಣೂರು ತಂಡದವರು ಶವಗಳನ್ನು ಮೇಲಕ್ಕೆತ್ತಿದ್ದಾರೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ನವೆಂಬರ್ 1 ರಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ.

Ads on article

Advertise in articles 1

advertising articles 2

Advertise under the article