ಕೇರಳ: ರಸ್ತೆ ಬದಿ ಟೆಂಟ್ ನಲ್ಲಿ ಮಲಗಿದ್ದವರ ಮೇಲೆ ಚಲಿಸಿದ ಲಾರಿ ; ಎರಡು ಪುಟಾಣಿ ಮಕ್ಕಳು ಸೇರಿ ಐದು ಜನ ಸಾವು

ಕೇರಳ: ರಸ್ತೆ ಬದಿ ಟೆಂಟ್ ನಲ್ಲಿ ಮಲಗಿದ್ದವರ ಮೇಲೆ ಚಲಿಸಿದ ಲಾರಿ ; ಎರಡು ಪುಟಾಣಿ ಮಕ್ಕಳು ಸೇರಿ ಐದು ಜನ ಸಾವು

ಕೇರಳ ನವೆಂಬರ್ 26: ರಸ್ತೆ ಬದಿ ಟೆಂಟ್ ನಲ್ಲಿ ಮಲಗಿದ್ದವರ ಮೇಲೆ ಲಾರಿಯೊಂದು ಹರಿದ ಪರಿಣಾಮ ಎರಡು ಪುಟಾಣಿ ಮಕ್ಕಳು ಸೇರಿದಂತೆ ಐವರು ಸಾವನಪ್ಪಿದ ಘಟನೆ ತ್ರಿಶೂರ್ ಜಿಲ್ಲೆಯ ನಾಟಿಕಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಪಾಲಕ್ಕಾಡ್ ಗೋವಿಂದಪುರಂ ನಿವಾಸಿಗಳಾದ ಕಾಳಿಯಪ್ಪನ್ (50), ನಾಗಮ್ಮ (39), ಬಂಗಾಜಿ (20), ಜೀವನ್ (4) ಮತ್ತು ವಿಶ್ವ (1) ಎಂದು ಗುರುತಿಸಲಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಜೆಕೆ ಥಿಯೇಟರ್ ಬಳಿ ಅಪಘಾತ ಸಂಭವಿಸಿದ್ದು, ಗಾಯಗೊಂಡ 7 ಮಂದಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.


ಮರ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿ ಟೆಂಟ್ ನಲ್ಲಿ ಮಲಗಿದ್ದ ಜನರ ಮೇಲೆ ಹರಿದಿದೆ. ಘಟನೆಯ ಬೆನ್ನಲ್ಲೇ ಲಾರಿ ಚಾಲಕ ಕಣ್ಣೂರಿನ ಅಲೆಕ್ಸ್ (33) ಮತ್ತು ಕ್ಲೀನರ್ ನನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಟೆಂಟ್ ನಲ್ಲಿ ಇವರು ಮಲಗಿದ್ದರು. ಕಾಮಗಾರಿ ನಡೆಯುತ್ತಿರುವುದರಿಂದ ಈ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿತ್ತು. ಲಾರಿ ಚಾಲಕ “ಡೈವರ್ಷನ್ ಬೋರ್ಡ್” ಅನ್ನು ನಿರ್ಲಕ್ಷಿಸಿ ಲಾರಿ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article