ಮಂಗಳೂರು:ಸಿಸಿಬಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿ ಶೀಟರ್ ದಾವೂದ್; ಹಲ್ಲೆಯಿಂದ ಗಾಯಗೊಂಡ ಪೊಲೀಸರು;ಆರೋಪಿ ಅರೆಸ್ಟ್.
Sunday, November 24, 2024
ಮಂಗಳೂರು ನವೆಂಬರ್ 23: ನಟೋರಿಯಸ್ ರೌಡಿಯನ್ನು ವಶಕ್ಕೆ ಪಡೆಯಲು ಹೋದ ಪೊಲೀಸರ ಮೇಲೆ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ ಘಟನೆ ತಲಪಾಡಿಯಲ್ಲಿ ನಡೆದಿದೆ. ಉಳ್ಳಾಲದ ನಟೋರಿಯಸ್ ರೌಡಿ ದಾವೂದ್ ಸಿಸಿಬಿ ಪೊಲೀಸರ ಮೇಲೆ ದಾಳಿ ನಡೆಸಿದವನಾಗಿದ್ದು, ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ
ಕೇರಳ ಗಡಿಭಾಗ ತಲಪಾಡಿ ದೇವಿಪುರ ಎಂಬಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಮತ್ತೊಂದು ತಂಡದ ಮೇಲೆ ದಾವೂದ್ ಸಂಚು ನಡೆಸುತ್ತಿದ್ದಾನೆ ಎಂಬ ಮಾಹಿತಿ ಪಡೆದು ಪೊಲೀಸರು ಬಂಧನಕ್ಕೆ ತೆರಳಿದ್ದರು. ಈ ವೇಳೆ, ಮಚ್ಚಿನಿಂದ ದಾಳಿ ನಡೆಸಿದ್ದು ಘಟನೆಯಲ್ಲಿ ಸಿಸಿಬಿ ಎಸ್ಐ ನರೇಂದ್ರ ಮತ್ತು ಇನ್ಬೊಬ್ಬ ಎಎಸ್ಐಗೆ ಗಾಯವಾಗಿದೆ.
ದಾವೂದ್ ಟಾರ್ಗೆಟ್ ಗ್ಯಾಂಗ್ ಲೀಡರ್ ಇಲಿಯಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಲ್ಲದೆ, ಉಳ್ಳಾಲದಲ್ಲಿ ಹಲವು ಕೊಲೆ, ಕೊಲೆಯತ್ನ, ವಸೂಲಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದಾವೂದ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಿಎಸ್ಐ ನರೇಂದ್ರ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ