ಬೆಳ್ತಂಗಡಿ: ಹಿರಿಯ ಅನುಭವಿ ಪತ್ರಕರ್ತ ಬೆಳ್ತಂಗಡಿ ತಾಲೂಕಿನ ಪದುವೆಟ್ಟು ನಿವಾಸಿ ಭುವನೇಂದ್ರ ಪುದುವೆಟ್ಟು ಅನಾರೋಗ್ಯದಿಂದ ನಿಧನ.
Tuesday, November 19, 2024
ಬೆಳ್ತಂಗಡಿ: ಹಿರಿಯ ಅನುಭವಿ ಪತ್ರಕರ್ತ ಬೆಳ್ತಂಗಡಿ ತಾಲೂಕಿನ ಪದುವೆಟ್ಟು ನಿವಾಸಿ ಭುವನೇಂದ್ರ ಪುದುವೆಟ್ಟು (48) ಅವರು ನ.19ರ ಮಂಗಳವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಕನ್ನಡ ಜನಾಂತರಂಗದಿಂದ ವೃತ್ತಿ ಆರಂಭಸಿ, ವಿಜಯವಾಣಿ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ, ಹಿರಿಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿ ಕಳೆದ 6 ತಿಂಗಳಿನಿಂದ ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ ಪ್ರಧಾನ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ನ. 17 ರವಿವಾರ ತೀವ್ರ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡು ಆರೋಗ್ಯದಲ್ಲಿ ಏರುಪೇರಾದ ಕಾರಣ ಮೂಡುಬಿದ್ರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ತಪಾಸಣೆ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದರಿಂದ ಪ್ಯಾಂಕ್ರಿಯಾಸಿಸ್ ಇರುವುದು ಗೊತ್ತಾಗಿತ್ತು.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನ.18ರ ಸೋಮವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನ.19ರ ಮಂಗಳವಾರ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.