ಯೂಟ್ಯೂಬ್ ವೀಡಿಯೋ ನೋಡಿ ಹೃದಯ ಪರೀಕ್ಷೆ ನಡೆಸಿದ ವಾರ್ಡ್ ಬಾಯ್; ಜೋಧ್‌ಪುರ ಆಸ್ಪತ್ರೆಯಲ್ಲಿ ನಡೆದ ಘಟನೆಯ ವಿಡಿಯೊ ವೈರಲ್

ಯೂಟ್ಯೂಬ್ ವೀಡಿಯೋ ನೋಡಿ ಹೃದಯ ಪರೀಕ್ಷೆ ನಡೆಸಿದ ವಾರ್ಡ್ ಬಾಯ್; ಜೋಧ್‌ಪುರ ಆಸ್ಪತ್ರೆಯಲ್ಲಿ ನಡೆದ ಘಟನೆಯ ವಿಡಿಯೊ ವೈರಲ್

ವಾರ್ಡ್ ಬಾಯ್ ಒಬ್ಬರು ಯೂಟ್ಯೂಬ್ ವೀಡಿಯೋ ನೋಡಿ ರೋಗಿಯ ಹೃದಯ ಪರೀಕ್ಷೆ ನಡೆಸಿರುವ ಪ್ರಕರಣ ರಾಜಸ್ಥಾನದ ಜೋಧ್‌ಪುರದ ಆಸ್ಪತ್ರೆಯೊಂದರಲ್ಲಿ ನಡೆದಿದೆ. ದೀಪಾವಳಿ ರಜೆಯ ಕಾರಣ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹಾಜರಾಗಿರಲಿಲ್ಲ ಎನ್ನಲಾಗಿದೆ.

ಅಕ್ಟೋಬರ್ 31 ರ ಗುರುವಾರ ಜೋಧ್‌ಪುರದ ಪೌಟಾ ಆಸ್ಪತ್ರೆಯಲ್ಲಿ ರೋಗಿಯು ಅನಾರೋಗ್ಯದಿಂದ ಬಂದಾಗ ಈ ಘಟನೆ ಸಂಭವಿಸಿದೆ. ಈ ಘಟನೆಯ ವೀಡಿಯೋದಲ್ಲಿ, ವಾರ್ಡ್ ಬಾಯ್ ರೋಗಿಯ ಮೇಲೆ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಪರೀಕ್ಷೆಯನ್ನು ನಡೆಸುತ್ತಿರುವುದನ್ನು ಕಾಣಬಹುದು. ಅಲ್ಲಿ ಹಾಜರಿದ್ದವರಿಂದ ಪದೇಪದೆ ಆಕ್ಷೇಪಣೆಯ ನಂತರವೂ ಆತ ಪರೀಕ್ಷೆ ನಡೆಸಿದ್ದಾನೆ.

ವೀಡಿಯೊದಲ್ಲಿ, ವಾರ್ಡ್ ಬಾಯ್ ಇಸಿಜಿ ಪರೀಕ್ಷೆಯನ್ನು ಹೇಗೆ ಮಾಡಬೇಕೆಂದು ತಿಳಿದಿಲ್ಲ ಎಂದು ತಪ್ಪೊಪ್ಪಿಕೊಂಡಿರುವುದನ್ನು ಕಾಣಬಹುದು. ದೀಪಾವಳಿಯ ಕಾರಣ ತಂತ್ರಜ್ಞರು ಮತ್ತು ವೈದ್ಯಕೀಯ ಸಿಬ್ಬಂದಿ ರಜೆಯಲ್ಲಿದ್ದಾರೆ, ಆದ್ದರಿಂದ ನಾನು ಪರೀಕ್ಷೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.

“ಇಸಿಜಿ ಪರೀಕ್ಷೆಯ ಬಗ್ಗೆ ನಿಮಗೆ ತಿಳಿದಿಲ್ಲ, ಇದು ಪ್ರಮುಖ ಪರೀಕ್ಷೆ. ನೀವು ರೋಗಿಯನ್ನು ಕೊಲ್ಲಬಹುದು. ಕೆಲಸವು ಇಸಿಜಿಗೆ ಸಂಬಂಧಿಸಿದೆ, ದಯವಿಟ್ಟು ಅರ್ಥಮಾಡಿಕೊಳ್ಳಿ. ಅದನ್ನು ನೆಟ್‌ನಲ್ಲಿ (ಇಂಟರ್ನೆಟ್) ನೋಡಿದ ನಂತರ ನೀವು ಇಸಿಜಿ ಪರೀಕ್ಷೆಯನ್ನು ಹೇಗೆ ನಡೆಸುತ್ತೀರಿ” ಎಂದು ರೋಗಿಯ ಜೊತೆಗಿದ್ದ ವ್ಯಕ್ತಿ ಪ್ರಶ್ನಿಸಿದ್ದಾರೆ.

ಆಕ್ಷೇಪಣೆಗೆ ಮಣಿಯದೆ ವಾರ್ಡ್ ಬಾಯ್ ಪರೀಕ್ಷೆಯನ್ನು ಮುಂದುವರಿಸಿ, “ಹೌದು, ನಾನು ಇದನ್ನು ಮೊದಲ ಬಾರಿಗೆ ನಡೆಸುತ್ತಿದ್ದೇನೆ. ಆದರೆ, ಏನಾದರೂ ತೊಂದರೆ ಇದೆಯೇ? ನಾನು ಇಸಿಜಿ ಪರೀಕ್ಷೆಯನ್ನು ಮಾಡಿಲ್ಲ ಮತ್ತು ನಾನು ತಂತ್ರಜ್ಞನಲ್ಲ. ಆದರೆ, ದೀಪಾವಳಿಯ ಕಾರಣ ಆಸ್ಪತ್ರೆ ಸಿಬ್ಬಂದಿ ಗೈರು ಹಾಜರಾಗಿದ್ದಾರೆ” ಎಂದು ಹೇಳಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ನಂತರ ಜೋಧ್‌ಪುರ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಬಿಎಸ್‌ ಜೋಧಾ ಅವರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಆರೋಪಿ ವಾರ್ಡ್‌ ಬಾಯ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

“ನವೆಂಬರ್ 1 ರ ಶುಕ್ರವಾರದಂದು ವೀಡಿಯೊ ಕಾಣಿಸಿಕೊಂಡಿದೆ ಮತ್ತು ವಿಷಯವು ತನಿಖೆಯಲ್ಲಿದೆ. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಪರೀಕ್ಷೆಯು ಜೀವಕ್ಕೆ ಅಪಾಯವನ್ನುಂಟುಮಾಡುವುದಿಲ್ಲ. ತಪ್ಪಾದ ಇಸಿಜಿ ಪಾಯಿಂಟ್ ಪ್ಲೇಸ್‌ಮೆಂಟ್ ರೋಗಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ, ಅದು ವರದಿಯಲ್ಲಿ ತಪ್ಪಾದ ಫಲಿತಾಂಶವನ್ನು ಮಾತ್ರ ನೀಡುತ್ತದೆ” ಎಂದು ವೈದ್ಯರಾದ ಜೋಧಾ ಹೇಳಿದರು.

Ads on article

Advertise in articles 1

advertising articles 2

Advertise under the article