ರಾಜ ಮಂಡ್ರಿ :ಕೋಳಿ ಕಾಳಗದಲ್ಲಿ 1.5 ಕೋಟಿ ಗೆದ್ದ ವ್ಯಕ್ತಿ...!!

ರಾಜ ಮಂಡ್ರಿ :ಕೋಳಿ ಕಾಳಗದಲ್ಲಿ 1.5 ಕೋಟಿ ಗೆದ್ದ ವ್ಯಕ್ತಿ...!!

ರಾಜ ಮಂಡ್ರಿ :ಸುಗ್ಗಿ ಹಬ್ಬ ಸಂಕ್ರಾಂತಿ ಅಂಗವಾಗಿ ಆಂಧ್ರಪ್ರದೇಶದಲ್ಲಿ ಕೋಳಿ ಕಾಳಗ ಜೋರಾಗಿ ಸದ್ದು ಮಾಡುತ್ತಿದೆ. ಅಲ್ಲದೇ, ಕಣದಲ್ಲಿ ಹೋರಾಡಿದ ಕೋಳಿಯೊಂದು ತನ್ನ ಮಾಲೀಕನನ್ನು ಕೋಟ್ಯಧಿಪತಿಯನ್ನಾಗಿ ಮಾಡಿದೆ. ಗುಡಿವಾಡದ ಪ್ರಭಾಕರ್ ಅವರು ಆರು ತಿಂಗಳಿಂದ ಕೋಳಿಯನ್ನು ಅತ್ಯಂತ ಜೋಪಾನವಾಗಿ ಸಾಕಿದ್ದರು. ಅಖಾಡದಲ್ಲಿ ಎದುರಾಳಿಯನ್ನು ಸೋಲಿಸಲು ಅಗತ್ಯ ಆಹಾರದ ಜೊತೆಗೆ ತರಬೇತಿಯನ್ನು ಕೂಡ ನೀಡಿ ಬಲಿಷ್ಠವಾಗಿ ಮಾಡಿದ್ದರು. ಇದರಿಂದ ಕೋಳಿ ಅಖಾಡದಲ್ಲಿ ಗೆದ್ದು ಮಾಲೀಕನನ್ನು ಸಿರಿವಂತನನ್ನಾಗಿಸಿದೆ. ತಡೆಪಲ್ಲಿಗುಡೆಮ್‌ನ ರೈತ ವೆಂಕಟರಾಮಯ್ಯ ಅವರ ಆಶ್ರಯದಲ್ಲಿ ಸ್ಥಾಪಿಸಿದ್ದ ಅಖಾಡದಲ್ಲಿ ಗುಡಿವಾಡದ ಪ್ರಭಾಕರ್ ಅವರಿಗೆ ಸೇರಿದ ಸೇತುವಾ ತಳಿಯ ಕೋಳಿಯು ರಾಜಮಂಡ್ರಿಯ ರಮೇಶ್ ಅವರ ಡೇಗಾ ತಳಿಯ ಕೋಳಿಯನ್ನು ಎದುರಿಸಿ ಗೆದ್ದಿತು.

ಮಾಲೀಕನಿಗೆ 1.5 ಕೋಟಿ ರೂ: ರಮೇಶ್ ಅವರ ಕೋಳಿ ಸ್ಪರ್ಧೆಯಲ್ಲಿ ಗೆದ್ದು ತನ್ನ ಮಾಲೀಕರಿಗೆ 1.53 ಕೋಟಿ ರೂಪಾಯಿ ತಂದುಕೊಟ್ಟಿದೆ. ಇದರಿಂದ ಗೆದ್ದ ಕೋಳಿ ಮತ್ತು ಮಾಲೀಕನನ್ನು ಜನರು ಹೆಗಲು ಮೇಲೆ ಹೊತ್ತು ಸಂಭ್ರಮಿಸಿದರು.

Ads on article

Advertise in articles 1

advertising articles 2

Advertise under the article