ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆಲ್ಲರಿ ಅಂಗಡಿಗೆ ನುಗ್ಗಿ ಚಿನ್ನಾಭರಣ ದೋಚಿ ಎಸ್ಕೇಪ್, ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ...!!

ಬೆಂಗಳೂರು : ಚಿನ್ನದ ರೇಟು ಹೆಚ್ಚುತ್ತಿದ್ದಂತೆ ಚಿನ್ನದ ಅಂಗಡಿಗಳಿಗೆ ನುಗ್ಗಿ ದರೋಡೆ ನಡೆಸುವ ಕೃತ್ಯಗಳು ಹೆಚ್ಚುತ್ತಿವೆ. ನಿನ್ನೆ ವಿಜಯಪುರದಲ್ಲಿ ಗನ್ ತೋರಿಸಿ ಜುವೆಲ್ಲರಿ ದರೋಡೆ ನಡೆಸಲಾಗಿತ್ತು. ಇಂದು ಬೆಂಗಳೂರಿನಿಂದ ನೆಲಮಂಗಲದಲ್ಲಿ ಮೂವರು ಆಗಂತುಕರು ಹಾಡಹಗಲೇ ಜುವೆಲ್ಲರಿ ನುಗ್ಗಿ ಗನ್ ತೋರಿಸಿ ಬಂಗಾರದ ಒಡವೆಗಳನ್ನು ದೋಚಿಕೊಂಡು ಹೋಗಿದ್ದಾರೆ.
ನೆಲಮಂಗಲ ಬಳಿಯ ದಾಸನಪುರದ ರಾಮದೇವ್ ಜ್ಯುವೆಲ್ಲರಿ ಅಂಗಡಿಗೆ ಸಂಜೆ 5.30ರ ವೇಳೆಗೆ ಆಗಂತುಕರು ನುಗ್ಗಿದ್ದು ಅಂಗಡಿ ಮಾಲೀಕನಿಗೆ ಗನ್ ತೋರಿಸಿ ದರೋಡೆ ಮಾಡಿದ್ದಾರೆ. ಪ್ಲಾಸ್ಟಿಕ್ ರೀತಿಯ ಗನ್ ತೋರಿಸಿ ಬೆದರಿಸಿದ ದುಷ್ಕರ್ಮಿಗಳು 28 ಗ್ರಾಂ ಚಿನ್ನದ ಸರ, ಐವತ್ತು ಸಾವಿರ ನಗದು ಹಣವನ್ನು ಕಸಿದು ಪರಾರಿಯಾಗಿದ್ದಾರೆ. ಜ್ಯುವೆಲ್ಲರಿ ಶಾಪ್ ಮಾಲೀಕ ಪ್ರತಿರೋಧ ತೋರುತ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಮೂವರು ಚಿನ್ನದ ಒಡವೆಗಳನ್ನು ಕದ್ದೊಯ್ಯುವುದು, ಮಾಲೀಕನನಿಗೆ ಬೆದರಿಕೆ ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇವರು ರಾಜಸ್ಥಾನಿ ಭಾಷೆ ಮಾತನಾಡುತ್ತಿದ್ದರು ಎಂಬ ಮಾಹಿತಿ ಸ್ಥಳೀಯರಿಂದ ತಿಳಿದುಬಂದಿದೆ. ಸಾಕಷ್ಟು ಜನರು ಇರುವಾಗಲೇ ಕಳ್ಳರು ಒಳಗಡೆ ಬಂದು ಗನ್ ತೋರಿಸಿ ರಾಜಾರೋಷವಾಗಿ ಪರಾರಿಯಾಗಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಬೆಳಗಾವಿ ಗಡಿಯಲ್ಲಿ 400 ಕೋಟಿ ದರೋಡೆ ಆಗಿರುವುದು ಬೆಳಕಿಗೆ ಬಂದಿತ್ತು. ಮರುದಿನವೇ ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಗನ್ ತೋರಿಸಿ ದರೋಡೆ ಮಾಡಲಾಗಿತ್ತು. ಇದೀಗ ರಾಜಧಾನಿ ಬೆಂಗಳೂರಿನಲ್ಲು ದರೋಡೆಯಾಗಿದ್ದು ಮಾದನಾಯಕಹಳ್ಳಿ ಠಾಣೆಯಲ್ಲಿ ಜುವೆಲ್ಲರಿ ಮಾಲೀಕ ದೂರು ದಾಖಲಿಸಿದ್ದಾರೆ.