ಅಮೇರಿಕಾ :ಮಗುವಿಗೆ ಹೆಸರಿಡಲು ಪ್ರೊಫೆಷನಲ್ ಬೇಬಿ ನೇಮರ್ ಎಷ್ಟು ದುಡ್ಡು ತಗೋತಾರೆ?; ಹೆಸರು ಸೂಚಿಸಿ ಕೋಟ್ಯಾಧಿಪತಿಯಾದ ಮಹಿಳೆ...!

ಅಮೇರಿಕಾ :ಮಗುವಿಗೆ ಹೆಸರಿಡಲು ಪ್ರೊಫೆಷನಲ್ ಬೇಬಿ ನೇಮರ್ ಎಷ್ಟು ದುಡ್ಡು ತಗೋತಾರೆ?; ಹೆಸರು ಸೂಚಿಸಿ ಕೋಟ್ಯಾಧಿಪತಿಯಾದ ಮಹಿಳೆ...!

ಅಮೇರಿಕಾ: ನಿಮ್ಮ ಮನೆಗೆ ಮಗು ಆಗಮನವಾಗ್ತಾ ಇದ್ಯಾ, ಅದಕ್ಕೆ ಏನು ಹೆಸರು ಇಡೋದು ಅಂತ ತಲೆಕೆಡಿಸಿಕೊಳ್ಳಬೇಡಿ. ದುಡ್ಡು ಚೆನ್ನಾಗಿ ಇದ್ರೆ ಇವರ ಸಜೆಷನ್ ತಗೊಳಿ.

ಅಮೆರಿಕದ ಟೇಲ‌ರ್ ಹಂಫ್ರೆ ಅವರ ವ್ಯವಹಾರವು ಇತರರಿಗಿಂತ ಭಿನ್ನವಾಗಿದೆ. ಅವರು ಶಿಶುಗಳಿಗೆ ಪ್ರೊಫೆಶನಲ್ ಆಗಿ ಹೆಸರು ಸೂಚಿಸುತ್ತಾರೆ. ಶ್ರೀಮಂತರು ಅವರ ಸರ್ವೀಸ್ ಪಡೆಯಲು ಸಾವಿರಾರು ಡಾಲರ್ ಖರ್ಚು ಮಾಡಲು ಸಿದ್ಧರಿದ್ದಾರೆ.

ಟೇಲ‌ರ್ ಹಂಫ್ರೆ ಸುಮಾರು ಒಂದು ದಶಕದ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಹೆಸರುಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು. ಆ ಹವ್ಯಾಸ ಕ್ರಮೇಣ ಪೂರ್ಣ ಸಮಯದ ವೃತ್ತಿಯಾಗಿ ಬದಲಾಗಿದೆ.

ಹಂಫ್ರೆ ತನ್ನನ್ನು ತಾನು “Name Enthusiast”ಎಂದು ಕರೆದುಕೊಳ್ಳುತ್ತಾರೆ ಮತ್ತು ಕಸ್ಟಮೈಸ್ ಮಾಡಿದ ಹೆಸರುಗಳನ್ನು ಸೂಚಿಸುವ ಸಾವಿರಾರು ಹೆಸರುಗಳ ಸ್ಪ್ರೇಡ್‌ಶೀಟ್‌ಗಳನ್ನು ಹೊಂದಿದ್ದಾರೆ.

ಪ್ರತಿ ಕ್ಲೈಂಟ್ ಗೆ (ಸರಿಸುಮಾರು ₹27 ಲಕ್ಷ) ವರೆಗೆ ಶುಲ್ಕ ವಿಧಿಸುತ್ತಾರೆ. ಈ ಶುಲ್ಕವು ಹೆಸರಿಸುವ ಆಳ ಮತ್ತು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಕೇವಲ ಒಂದು ವರ್ಷದಲ್ಲಿ (2020), ಅವರು 100 ಕ್ಕೂ ಹೆಚ್ಚು ಮಕ್ಕಳಿಗೆ ಹೆಸರಿಡಲು ಹೆಸರಿಟ್ಟು $150,000 (ಸುಮಾರು ₹1.33 ಕೋಟಿ) ಗಳಿಸಿದ್ದಾರೆ.
ಕೆಲವು ಪೋಷಕರು 10,000 ಡಾಲರ್ ಎಂದರೆ 7.6 ಲಕ್ಷ ರೂಪಾಯಿ ಸಹ ನೀಡುತ್ತಾರೆ. ಇಂತಹ ದೊಡ್ಡ ಮೊತ್ತವನ್ನು ನೀಡುತ್ತಾರೆಯೇ ಮಗುವಿಗೆ ಒಳ್ಳೆಯ ಹೆಸರು ಸೂಚಿಸುವುದಕ್ಕೆ ಅಂತ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಇಷ್ಟು ದೊಡ್ಡ ಮೊತ್ತವನ್ನು ಪಡೆದು ಹಂಫ್ರೆ ಅವರು ಪೋಷಕರು ತಮ್ಮ ಮಗುವಿಗೆ ಉತ್ತಮವಾದ ಹೆಸರು ನಿರ್ಧರಿಸಲು ಸಹಾಯ ಮಾಡುತ್ತಾರೆ.

ಕಡಿಮೆ ಹಣದ ಆಯ್ಕೆಯಲ್ಲಿ 1,500 ಡಾಲರ್ ಹಣದಲ್ಲಿ ಹಳೆಯ ಕುಟುಂಬದ ಹೆಸರುಗಳನ್ನು ಸೂಚಿಸಲಾಗುತ್ತದೆ. ಇದರಲ್ಲಿ ವಂಶಾವಳಿಯ ಬಗ್ಗೆ ತಿಳಿದುಕೊಳ್ಳಲು ಒಂದು ದೂರವಾಣಿ ಕರೆ ಮತ್ತು ಮಕ್ಕಳ ಹೆಸರುಗಳ ಒಂದು ಪಟ್ಟಿಯನ್ನು ನೀಡಲಾಗುತ್ತದೆ.
ಹಂಫ್ರೆ 2015 ರಲ್ಲಿ ತನ್ನ ನೆಚ್ಚಿನ ಮಗುವಿನ ಹೆಸರುಗಳು ಮತ್ತು ಅವುಗಳ ಅರ್ಥಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಈ ವೃತ್ತಿಪರ ಜೀವನವನ್ನು ಶುರು ಮಾಡಿದರು.

ಹೆಸರನ್ನು ಸೂಚಿಸುವ ಮೊದಲು, ಪೋಷಕರ ವ್ಯಕ್ತಿತ್ವ, ಇಷ್ಟಾನಿಷ್ಟಗಳು, ಕುಟುಂಬದ ಹಿನ್ನೆಲೆ ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಲು ಅವರು ವಿಶೇಷ ಪ್ರಶ್ನಾವಳಿಯನ್ನು ಭರ್ತಿ ಮಾಡಬೇಕಾಗುತ್ತದೆ.


Ads on article

Advertise in articles 1

advertising articles 2

Advertise under the article