ಬೆಂಗಳೂರು :ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಉದ್ಯಮಿ ಪುತ್ರಿ ಅರೆಸ್ಟ್...!!!

ಬೆಂಗಳೂರು :ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಉದ್ಯಮಿ ಪುತ್ರಿ ಅರೆಸ್ಟ್...!!!

ಬೆಂಗಳೂರು :ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಉದ್ಯಮಿ ಪುತ್ರಿ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಿದ್ದು,ಆರೋಪಿಗಳಿಂದ 4 ಕೆಜಿ ಗಾಂಜಾ, 37 ಗ್ರಾಂ ಎಡಿಎಂಎ, 35 ಗ್ರಾಂ ಹ್ಯಾಶಿಶ್  ಅನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರುಜಪ್ತಿ ಮಾಡಿದ್ದಾರೆ.

ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ತರುಣ್‌ ಹಾಗೂ ದಿಲೀಪ್‌ ಸೇರಿ ಮೂವರ ಪತ್ತೆಗೆ ತನಿಖೆ ಮುಂದುವರಿದಿದೆ.  ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ಡ್ರಗ್ಸ್ ಮಾರಾಟದ ಬಗ್ಗೆ ಸಿಸಿಬಿಯ ಮಹಿಳಾ ಮತ್ತು ಮಕ್ಕಳ ರಕ್ಷಣಾ ದಳಕ್ಕೆ ಬಾತ್ಮೀದಾರರ ಮೂಲಕ ಸುಳಿವು ಸಿಕ್ಕಿದೆ. ಕೂಡಲೇ ಮಾಹಿತಿ ಆಧರಿಸಿ ಇನ್ಸ್‌ಪೆಕ್ಟರ್‌ಗಳಾದ ಸುಬ್ರಹ್ಮಣ್ಯಪುರ ಠಾಣೆ ಎಂ.ಎಸ್‌.ರಾಜು ಹಾಗೂ ಸಿಸಿಬಿಯ ಜೆ.ಸಿ.ರಾಜು ನೇತೃತ್ವದ ತಂಡವು ದಾಳಿ ನಡೆಸಿದ್ದಾರೆ.

ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ವಿದ್ಯಾರ್ಥಿನಿ ಮೇಘನಾ ಈ ಕೃತ್ಯದಲ್ಲಿ ಭಾಗಿಯಾಗಿದ್ದರೆ. ಈಕೆಯ ತಂದೆ ಉದ್ಯಮಿ ಆಗಿದ್ದು, ಬನಶಂಕರಿ ಸಮೀಪ ಮೇಘನಾ ಕುಟುಂಬ ನೆಲೆಸಿದೆ. ಆರ್ಥಿಕವಾಗಿ ಉತ್ತಮ ಸ್ಥಿತಿವಂತರು.

ಮೊದಲು ತನ್ನ ಸ್ನೇಹಿತರ ಮೂಲಕ ಮಾದಕ ವಸ್ತು ವ್ಯಸನಿಯಾದ ಆಕೆ, ನಂತರ ಪೆಡ್ಲರ್ ಆಗಿ ರೂಪಾಂತರಗೊಂಡಿದ್ದಾಳೆ.  ಸ್ನೇಹಿತರಾದ ತರುಣ್ ಹಾಗೂ ದಿಲೀಪ್ ಸೂಚನೆ ಮೇರೆಗೆ ಮೇಘನಾ ಕೆಲಸ ಮಾಡುತ್ತಿದ್ದಳು. ತನ್ನ ಪ್ರಿಯಕರನ ಗೆಳೆಯ ಆದಿತ್ಯ ಜತೆಗೂಡಿ ಡ್ರಗ್ಸ್ ಪೂರೈಕೆಯಲ್ಲಿ ಆಕೆ ತೊಡಗಿದ್ದಳು. ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಈ ತಂಡ ದಂಧೆ ಮಾಡುತ್ತಿತ್ತು. ಗ್ರಾಹಕರು ಕಳುಹಿಸುವ ಲೋಕೇಷನ್‌ಗೆ ತೆರಳಿ ಆದಿತ್ಯ ಡ್ರಗ್ಸ್ ತಲುಪಿಸಿದರೆ, ಅವರಿಂದ ಆನ್‌ಲೈನ್‌ ಮೂಲಕ ಹಣವನ್ನು ಮೇಘನಾ ಸ್ವೀಕರಿಸುತ್ತಿದ್ದಳು ಎಂದು ಮಾಹಿತಿ ಲಭ್ಯವಾಗಿದೆ.

Ads on article

Advertise in articles 1

advertising articles 2

Advertise under the article