ಬೆಂಗಳೂರು :ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಏನಿದರ ಗುಟ್ಟು..?

ಬೆಂಗಳೂರು :ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಏನಿದರ ಗುಟ್ಟು..?

ಬೆಂಗಳೂರು :ಸಲಿಂಗಿಗಳ ವಿವಾಹಕ್ಕೆ ಸುಪ್ರೀಂಕೋರ್ಟ್ ಅಕ್ಟೋಬರ್ 2023 ರಲ್ಲಿ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ್ದರೂ, ಅದಕ್ಕೂ ಮುನ್ನ ಅವರ ಹಕ್ಕುಗಳನ್ನು ಕೋರ್ಟ್ ಎತ್ತಿಹಿಡಿದಿದೆ, ಸಲಿಂಗ ಸಂಬಂಧಗಳು ಈಗ ಅಪರಾಧವಲ್ಲ ಎಂದು 2018 ರಲ್ಲಿ ಕೋರ್ಟ್ ಹೇಳಿದೆ.ಬೆಂಗಳೂರಿನಲ್ಲಿ ಒಟ್ಟಿಗೆ ವಾಸಿಸುತ್ತಿರುವ ಸಲಿಂಗಕಾಮಿ ದಂಪತಿಯಲ್ಲಿ ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ ಎನ್ನುವ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ದಿನಗಳಿಂದ ಹಲ್‌ಚಲ್‌ ಸೃಷ್ಟಿಸುತ್ತಿದೆ. ಅವರ ಫೋಟೋಗಳನ್ನೂ ರಿವೀಲ್‌ ಮಾಡಲಾಗಿದೆ. ಈ ಜೋಡಿ ತಮ್ಮ ಗರ್ಭಧಾರಣೆಯ ಬಗ್ಗೆ ಸಾರ್ವಜನಿಕವಾಗಿ ವಿವರಗಳನ್ನು ಹಂಚಿಕೊಂಡಿಲ್ಲವಾದರೂ, ಇವರ ಜೋಡಿ ಹೊರಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.ಆದರೆ, ಇದು ಹೇಗೆ ಸಾಧ್ಯ ಎನ್ನುವ ಬಗ್ಗೆ ಅವರನ್ನು ಕೇಳಲು ಯಾರಿಗೂ ಧೈರ್‍ಯ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಇದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎನ್ನುವುದೂ ಅಷ್ಟೇ ಸತ್ಯ. ಇದು ಕೃತಕ ಬುದ್ಧಿಮತ್ತೆಯಿಂದ (AI) ರೂಪುಗೊಂಡಿರುವ ಫೋಟೋ ಆಗಿರುವಲ್ಲಿಯೂ ಯಾವುದೇ ಸಂದೇಹವಿಲ್ಲ. ಒಂದು ಸುಳ್ಳು ಸುದ್ದಿಯನ್ನು ಯಾರೋ ಒಬ್ಬರು ಶೇರ್‌ ಮಾಡಿದರೆ, ಅದು ನಿಜನೋ, ಸುಳ್ಳೋ ಎಂದು ತಿಳಿಯದೇ ಶೇರ್‌ ಆಗುತ್ತಲೇ ಇರುತ್ತದೆ. ಅದರಲ್ಲಿಯೂ ಇಂಥ ಸುದ್ದಿಗಳು ಮೊದಲ ಆದ್ಯತೆ ಪಡೆಯುತ್ತವೆ. ಅದರಲ್ಲಿಯೂ ನೋಡಲು ಸುಂದರ ಯುವತಿಯರಾಗಿದ್ದರೆ ಮುಗಿದೇ ಹೋಯ್ತು. ಅದಕ್ಕಾಗಿ ಸುಳ್ಳು ಸುದ್ದಿಗಳು ಕೂಡ ಸತ್ಯದ ತಲೆಯ ಮೇಲೆ ಹೊಡೆದಂತೆ ಪ್ರಸಾರ ಆಗುತ್ತಿರುತ್ತವೆ.ಅದೇ ರೀತಿ ಈ ಫೋಟೋ ಮತ್ತು ಸುದ್ದಿಗಳು ಕೂಡ ಫೇಕ್‌ ಆಗಿದ್ದಿರಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ಕೆಲವೊಮ್ಮೆ ಕೆಲವರು ದ್ವಿಲಿಂಗಿಗಳಾಗಿರುತ್ತಾರೆ. ಇದರ ಅರ್ಥ ಹೆಣ್ಣಾಗಿದ್ದರೆ, ಇನ್ನೋರ್ವ ಹೆಣ್ಣು ಮತ್ತು ಗಂಡಿನ ಮೇಲೂ ವ್ಯಾಮೋಹ ಇರುತ್ತದೆ, ಗಂಡಾಗಿದ್ದರೂ ಇದೇ ರೀತಿ ಎರಡೂ ಲಿಂಗಿಗಳ ಮೇಲೆ ಆಕರ್ಷಣೆ ಇರುತ್ತದೆ. ಅಂಥ ಸಂದರ್ಭಗಳಲ್ಲಿ ಸಲಿಂಗಿಗಳು ಒಟ್ಟಿಗೇ ಇದ್ದರೂ ಒಬ್ಬರು ಬೇರೊಬ್ಬರಿಂದ ಗರ್ಭ ಧರಿಸಿದರೆ ಅಚ್ಚರಿಯೇನಿಲ್ಲ.

Ads on article

Advertise in articles 1

advertising articles 2

Advertise under the article