ಉತ್ತರ ಪ್ರದೇಶ :ಪ್ರೀತಿ ಒಪ್ಪದ ಶಿಕ್ಷಕಿಯ ತುಟಿ ಕಚ್ಚಿದ 12ನೇ ತರಗತಿ ವಿದ್ಯಾರ್ಥಿ...!!!

ಉತ್ತರ ಪ್ರದೇಶ :ಪ್ರೀತಿ ಒಪ್ಪದ ಶಿಕ್ಷಕಿಯ ತುಟಿ ಕಚ್ಚಿದ 12ನೇ ತರಗತಿ ವಿದ್ಯಾರ್ಥಿ...!!!

ಉತ್ತರ ಪ್ರದೇಶ :ಲವ್ ಮಾಡಲು ಒಪ್ಪದ ಶಿಕ್ಷಕಿಯ ತುಟಿಯನ್ನು 12ನೇ ತರಗತಿ ವಿದ್ಯಾರ್ಥಿ ಕಚ್ಚಿ ತುಂಡರಿಸಿದ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯ ಸದರ್ ಕೊತ್ವಾಲಿ ವ್ಯಾಪ್ತಿಯಲ್ಲಿ ನಡೆದಿದೆ.

ತನ್ನನ್ನು ನಿರಂತರವಾಗಿ ಪೀಡಿಸುತ್ತಿದ್ದ ವಿದ್ಯಾರ್ಥಿಯ ಕಾಟ ತಾಳಲಾರದೆ ಶಿಕ್ಷಕಿ ಶಾಲೆಯನ್ನೇ ಬಿಟ್ಟಿದ್ದರೂ, ಆಕೆಯನ್ನ ಬೆನ್ನಟ್ಟಿದ ಕಾಮುಕ ವಿದ್ಯಾರ್ಥಿ ದಾರಿಯಲ್ಲಿ ತಡೆದು ಶಿಕ್ಷಕಿಯ ತುಟಿಗಳನ್ನು ಕಚ್ಚಿ ತುಂಡರಿಸಿ ವಿಕೃತಿ ಮೆರೆದಿದ್ದಾನೆ.
ಸಂತ್ರಸ್ತ ಶಿಕ್ಷಕಿ ಎಂದಿನಂತೆ ಖಾಸಗಿ ಟ್ಯೂಷನ್ ನೀಡಲು ತೆರಳುತ್ತಿದ್ದಾಗ, ಅದೇ ಶಾಲೆಯ 12ನೇ ತರಗತಿಯ ವಿದ್ಯಾರ್ಥಿ ದಾರಿಯಲ್ಲಿ ಅಡ್ಡಗಟ್ಟಿದ್ದಾನೆ. ಮೊದಲು ವಾಗ್ವಾದಕ್ಕಿಳಿದ ವಿದ್ಯಾರ್ಥಿ, ನಂತರ ಏಕಾಏಕಿ ಶಿಕ್ಷಕಿಯ ಕುತ್ತಿಗೆಗೆ ಕೈಹಾಕಿ ಎಳೆದಾಡಿದ್ದಾನೆ. ಶಿಕ್ಷಕಿ ಪ್ರತಿರೋಧ ವ್ಯಕ್ತಪಡಿಸಿದಾಗ ರೊಚ್ಚಿಗೆದ್ದ ಆತ, ಆಕೆಯ ಮುಖಕ್ಕೆ ಮುಖವನ್ನು ಸೇರಿಸಿ ತುಟಿಗೆ ಮುತ್ತಿಡಲು ಮುಂದಾಗಿದ್ದಾನೆ. ಇದರಿಂದ ಗಲಿಬಿಲಿಗೊಂಡು ಕೊಸರಾಡಿದಾಗ ಹಲ್ಲುಗಳಿಂದ ಎರಡೂ ತುಟಿಗಳನ್ನು ಗಟ್ಟಿಯಾಗಿ ಕಚ್ಚಿ ತುಟಿಗಳನ್ನು ತುಂಡರಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಈ ವಿದ್ಯಾರ್ಥಿ ಕಳೆದ ಹಲವು ದಿನಗಳಿಂದ ಶಿಕ್ಷಕಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಶಾಲೆಯ ಆವರಣದಲ್ಲೂ ಚೇಷ್ಟೆ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಶಿಕ್ಷಕಿಯ ಕುಟುಂಬದವರು ವಿದ್ಯಾರ್ಥಿಯ ಪೋಷಕರಿಗೆ ದೂರು ನೀಡಿದ್ದರು. ಕೆಲ ದಿನ ಸುಮ್ಮನಿದ್ದ ವಿದ್ಯಾರ್ಥಿ ಮತ್ತೆ ತನ್ನ ವಿಕೃತಿಯನ್ನು ಮುಂದುವರಿಸಿದ್ದ. ಈ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿ ಆ ಶಾಲೆಯ ಕೆಲಸವನ್ನೇ ಬಿಟ್ಟು ಬೇರೆಡೆ ಸೇರಿಕೊಂಡಿದ್ದರು. ಆದರೆ, ಅಲ್ಲಿಯೂ ಬೆನ್ನಟ್ಟಿದ ವಿದ್ಯಾರ್ಥಿ ಈ ಭೀಕರ ಕೃತ್ಯ ಎಸಗಿದ್ದಾನೆ. ಈ ಅಮಾನವೀಯ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ವಿದ್ಯಾರ್ಥಿಯು ಶಿಕ್ಷಕಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವುದು ಮತ್ತು ದಾಳಿ ಮಾಡುತ್ತಿರುವುದು ವಿಡಿಯೋದಲ್ಲಿದೆ. ತೀವ್ರವಾಗಿ ಗಾಯಗೊಂಡ ಶಿಕ್ಷಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾಕ್ಕೆ ರವಾನಿಸಲಾಗಿದೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಮೇರೆಗೆ ಮೈನ್‌ಪುರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ವಿದ್ಯಾರ್ಥಿ ಸದ್ಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ

Ads on article

Advertise in articles 1

advertising articles 2

Advertise under the article