ಬೆಂಗಳೂರು :ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ ದರೋಡೆ, ಸ್ಕೂಟರ್ ಅಡ್ಡಗಟ್ಟಿ ಲಾಂಗ್ ತೋರಿಸಿ 31 ಲಕ್ಷ ಲೂಟಿ, ಬೆಂಗಳೂರು ಖಾಕಿ ಖದರಿಗೆ ಕೆಸರು !

ಬೆಂಗಳೂರು :ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ ದರೋಡೆ, ಸ್ಕೂಟರ್ ಅಡ್ಡಗಟ್ಟಿ ಲಾಂಗ್ ತೋರಿಸಿ 31 ಲಕ್ಷ ಲೂಟಿ, ಬೆಂಗಳೂರು ಖಾಕಿ ಖದರಿಗೆ ಕೆಸರು !

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಬನ್ನೇರುಘಟ್ಟ ಸಮೀಪ ಹಾಡಹಗಲೇ ಸಿನಿಮೀಯ ರೀತಿ ನಡೆದ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಬೈಕ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್, ಬರೋಬ್ಬರಿ 31,38,625 ರು. ನಗದು ದೋಚಿರುವ ಘಟನೆ ಬನ್ನೇರುಘಟ್ಟ ಬಳಿ ನಡೆದಿದೆ.

ಕೈಲಾಸ್ ಎಂಬ ಯುವಕ, ರಾಕೇಶ್ ಎಂಬವರ ಬಳಿ ಕ್ಯಾಷ್ ಕಲೆಕ್ಟಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಉಡಾನ್ ಕಂಪನಿಯ ವಿವಿಧ ಬ್ರಾಂಚ್‌ಗಳಿಗೆ ಭೇಟಿ ನೀಡಿ ಹಣ ಸಂಗ್ರಹಿಸುವ ಜವಾಬ್ದಾರಿ ಹೊಂದಿದ್ದ. ಭಾನುವಾರ ಸಂಜೆ ಎಂದಿನಂತೆ ವಿವಿಧ ಶಾಖೆಗಳಿಂದ ಒಟ್ಟು ₹31,38,625 ಹಣವನ್ನು ಸಂಗ್ರಹಿಸಿದ್ದ ಕೈಲಾಸ್, ಆ ಹಣವನ್ನು ತನ್ನ ಜುಪಿಟರ್ ಸ್ಕೂಟರ್‌ನ ಡಿಕ್ಕಿಯಲ್ಲಿ ಇಟ್ಟುಕೊಂಡು ಸಂಚರಿಸುತ್ತಿದ್ದ.

ಭಾನುವಾರ ಸಂಜೆ ಸುಮಾರು 4.20ರ ಸುಮಾರಿಗೆ ಬನ್ನೇರುಘಟ್ಟದತ್ತ ಸಾಗುತ್ತಿದ್ದ ವೇಳೆ, ಎರಡು ಬೈಕ್‌ಗಳಲ್ಲಿ ಬೆನ್ನತ್ತಿಕೊಂಡು ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಕೈಲಾಸ್‌ನ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದಾರೆ. ಲಾಂಗ್ ತೋರಿಸಿ ಹಲ್ಲೆಗೆ ಯತ್ನಿಸಿದ ಆರೋಪಿಗಳು, ಕೈಲಾಸ್‌ನನ್ನು ಬೆದರಿಸಿ ಸ್ಕೂಟರ್ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ.

ದರೋಡೆಕೋರರು ಸುಮಾರು ಒಂದು ಕಿಲೋಮೀಟರ್ ದೂರದ ವರೆಗೆ ಸ್ಕೂಟರ್ ಚಲಾಯಿಸುತ್ತ ಹೋಗಿದ್ದು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಅದರ ಡಿಕ್ಕಿಯಲ್ಲಿದ್ದ 31 ಲಕ್ಷ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದು, ದರೋಡೆ ಪ್ರಕರಣ ದಾಖಲಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮೂಲಕ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

Ads on article

Advertise in articles 1

advertising articles 2

Advertise under the article