ಉತ್ತರ ಪ್ರದೇಶ :ಫ್ರೀ ಮೊಮೋಸ್‌ಗಾಗಿ 85 ಲಕ್ಷ ರೂಪಾಯಿ ಒಡವೆ ಕೊಟ್ಟ ಬಾಲಕ...!!

ಉತ್ತರ ಪ್ರದೇಶ :ಫ್ರೀ ಮೊಮೋಸ್‌ಗಾಗಿ 85 ಲಕ್ಷ ರೂಪಾಯಿ ಒಡವೆ ಕೊಟ್ಟ ಬಾಲಕ...!!

ಉತ್ತರ ಪ್ರದೇಶ :ಮೊಮೊಸ್‌ ತಿನ್ನುವ ಅತಿಯಾದ ಆಸೆಯಿಂದಾಗಿ 7ನೇ ತರಗತಿಯ ಬಾಲಕನೊಬ್ಬ ತನ್ನ ಮನೆಯಲ್ಲಿದ್ದ ಸುಮಾರು 85 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಬೀದಿಬದಿಯ ವ್ಯಾಪಾರಿಗಳಿಗೆ ನೀಡಿರುವ ಘಟನೆ ಉತ್ತರ ಪ್ರದೇಶದ ದೇವೂರಿಯಾ ನಗರದಲ್ಲಿ ನಡೆದಿದೆ.

ವಾರಣಾಸಿಯ ದೇವಾಲಯವೊಂದರಲ್ಲಿ ಅರ್ಚಕರಾಗಿರುವ ವಿಮಲೇಶ್ ಮಿಶ್ರಾ ಅವರ ಮಗನಿಗೆ ಮೊಮೊ ಎಂದರೆ ಪಂಚಪ್ರಾಣ. ಬಾಲಕನ ಈ ಚಪಲವನ್ನೇ ಬಂಡವಾಳ ಮಾಡಿಕೊಂಡ ಸ್ಥಳೀಯ ಮೊಮೊ ಅಂಗಡಿಯ ಮೂವರು ಮಾಲೀಕರು ಆತನಿಗೆ ಬಲೆ ಬೀಸಿದ್ದರು. “ಮನೆಯಿಂದ ಚಿನ್ನಾಭರಣ ತಂದುಕೊಟ್ಟರೆ ನಿನಗೆ ಬೇಕಾದಷ್ಟು ಮೊಮೊಗಳನ್ನು ಉಚಿತವಾಗಿ ನೀಡುತ್ತೇವೆ” ಎಂದು ಆತನಿಗೆ ಆಸೆ ತೋರಿಸಿದ್ದರು. ಈ ಆಮಿಷಕ್ಕೆ ಬಲಿಯಾದ ಅಮಾಯಕ ಬಾಲಕ, ಮನೆಯವರಿಗೆ ತಿಳಿಯದಂತೆ ಹಂತ ಹಂತವಾಗಿ ಮನೆಯಲ್ಲಿದ್ದ ಬೆಲೆಬಾಳುವ ಆಭರಣಗಳನ್ನು ತಂದು ವ್ಯಾಪಾರಿಗಳ ಕೈಗಿಟ್ಟಿದ್ದಾನೆ.

ಈ ಘಟನೆಯು ಬೆಳಕಿಗೆ ಬಂದಿದ್ದು ವಿಮಲೇಶ್ ಅವರ ಸಹೋದರಿ ಮನೆಗೆ ಭೇಟಿ ನೀಡಿದಾಗ. ಸಹೋದರಿಯು ತನ್ನ ಆಭರಣಗಳನ್ನು ಕೇಳಿದಾಗ ಮಿಶ್ರಾ ಕುಟುಂಬದವರು ಕಪಾಟು ತೆರೆದು ನೋಡಿದ್ದಾರೆ. ಅಲ್ಲಿ ಸಂಗ್ರಹಿಸಿಟ್ಟಿದ್ದ ಎಲ್ಲಾ ಒಡವೆಗಳು ಮಾಯವಾಗಿರುವುದನ್ನು ಕಂಡು ಅವರು ಹೌಹಾರಿದ್ದಾರೆ. ಎಲ್ಲ ಕಡೆ ಹುಡುಕಾಡಿ ಕೊನೆಗೆ ಬಾಲಕನನ್ನು ತೀವ್ರವಾಗಿ ವಿಚಾರಿಸಿದಾಗ, ತಾನು ಮೊಮೊ ತಿನ್ನುವ ಸಲುವಾಗಿ ಅಂಗಡಿಯವರಿಗೆ ಒಡವೆಗಳನ್ನು ನೀಡಿರುವ ಸತ್ಯವನ್ನು ಆತ ಒಪ್ಪಿಕೊಂಡಿದ್ದಾನೆ.

ಹೀಗಾಗಿ, ಮೂವರು ಮೋಮೊಸ್‌ ವ್ಯಾಪಾರಿಗಳು ಬಾಲಕನಿಗೆ ಒಂದು ಆಮಿಷವೊಡ್ಡಿದ್ದಾರೆ. ಮನೆಯಲ್ಲಿರುವ ಎಲ್ಲ ಚಿನ್ನಾಭರಣ ತಂದುಕೊಟ್ಟರೆ, ಎಷ್ಟು ಬೇಕೋ ಅಷ್ಟು ಮೋಮೊಸ್‌ ಕೊಡುತ್ತೇವೆ ಎಂದಿದ್ದಾರೆ. ಇದನ್ನೇ ನಂಬಿದ ಬಾಲಕ ಮನೆಯ ಲಾಕರ್‌ನಲ್ಲಿದ್ದ ಚಿನ್ನವನ್ನು ಕದ್ದು ಹಂತ ಹಂತವಾಗಿ ವ್ಯಾಪಾರಿಗಳಿಗೆ ಕೊಟ್ಟಿದ್ದಾನೆ. ಹೀಗೆ ಮನೆಯಲ್ಲಿದ್ದ ಬಹುತೇಕ ಆಭರಣಗಳು ವ್ಯಾಪಾರಿಗಳ ಪಾಲಾಗಿದೆ.

ಸದ್ಯ ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ವಿಮಲೇಶ್ ಮಿಶ್ರಾ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಾಪತ್ತೆಯಾಗಿರುವ ಮೂವರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article