ಮಂಗಳೂರು :ಕುತ್ಲೂರಿನಲ್ಲಿ ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ ; ರಾಯಚೂರು ಮೂಲದ ಕೇರಳ ನಕ್ಸಲ್ ಜಯಣ್ಣ ಬೆಳ್ತಂಗಡಿ ಕೋರ್ಟಿಗೆ ಹಾಜರು..!!

ಮಂಗಳೂರು :ಕುತ್ಲೂರಿನಲ್ಲಿ ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ ; ರಾಯಚೂರು ಮೂಲದ ಕೇರಳ ನಕ್ಸಲ್ ಜಯಣ್ಣ ಬೆಳ್ತಂಗಡಿ ಕೋರ್ಟಿಗೆ ಹಾಜರು..!!

ಮಂಗಳೂರು, ಫೆ.19:ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣದಲ್ಲಿ ಕೇರಳದಲ್ಲಿ ಶರಣಾಗತಿಯಾಗಿದ್ದ ರಾಯಚೂರು ಮೂಲದ ನಟೋರಿಯಸ್ ನಕ್ಸಲ್ ಜಾನ್@ ಜಯಣ್ಣ@ಮಹೇಶ್ (49) ನನ್ನು  ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೇರಳದ ತ್ರಿಶೂರ್  ಜೈಲಿನಲ್ಲಿ ಇರಿಸಿದ್ದ ಜಯಣ್ಣ(49) ನನ್ನು ಬಿಗಿ ಭದ್ರತೆಯಲ್ಲಿ ಕೇರಳ ವಿಶೇಷ ಪೊಲೀಸರು ಬೆಳ್ತಂಗಡಿ ಕರೆತಂದು  ಕೋರ್ಟಿಗೆ ಹಾಜರು ಮಾಡಿಸಿದ್ದಾರೆ.

ಬೆಳ್ತಂಗಡಿಯ ಕುತ್ಲೂರು ಎಂಬಲ್ಲಿ 2012 ರಲ್ಲಿ ನಕ್ಸಲ್ ಕರಪತ್ರಗಳನ್ನು ಹಂಚಿದ್ದ ಪ್ರಕರಣ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಬಾಡಿ ವಾರೆಂಟ್ ಪಡೆದು ಕೇರಳದ ಜೈಲಿನಿಂದ ಕರೆತಂದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಮೂಲತಃ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮದ ನಿವಾಸಿಯಾಗಿದ್ದ ಜಯಣ್ಣ ನಕ್ಸಲ್ ಚಳವಳಿಗೆ ಆಕರ್ಷಿತನಾಗಿ ತಂಡದಲ್ಲಿ ಸೇರಿಕೊಂಡು ಕರ್ನಾಟಕದಲ್ಲಿ ಎಎನ್ಎಫ್ ಕಾರ್ಯಾಚರಣೆ ಬಿಗಿಯಾಗುತ್ತಿದ್ದಂತೆ ಕೇರಳಕ್ಕೆ ಪರಾರಿಯಾಗಿದ್ದ. 2012 ರಲ್ಲಿ ಕೊತ್ಲೂರಿನ ಲಿಂಗಪ್ಪ ಮಲೆಕುಡಿಯ ಅವರ ಮನೆಯ ಅಂಗಳದಲ್ಲಿ ನಕ್ಸಲ್ ಕರಪತ್ರಗಳನ್ನು ಹಚ್ಚಿದ್ದ ಪ್ರಕರಣದಲ್ಲಿ ಜಯಣ್ಣ ಪ್ರಮುಖ ಆರೋಪಿಯಾಗಿದ್ದ. 

ಇತ್ತಿಚೆಗೆ ಪ್ರಕರಣದ ಮರು ತನಿಖೆಗೆ ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಿದ್ದರಿಂದ ತನಿಖೆ ಸಲುವಾಗಿ ಕೇರಳ ಪೊಲೀಸರು ಕರೆತಂದಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಕೇರಳ ಸಿಎಂ ಪಿಣರಾಯಿ ಎದುರಲ್ಲಿ ಶರಣಾಗತಿಯಾಗಿದ್ದ ಜಯಣ್ಣನನ್ನು ವಿವಿಧ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಯುತ್ತಿರುವುದರಿಂದ ತ್ರಿಶೂರ್ ಜೈಲಿನಲ್ಲಿ ಇರಿಸಲಾಗಿದೆ

Ads on article

Advertise in articles 1

advertising articles 2

Advertise under the article