ಚಿಕ್ಕಮಗಳೂರು :ವರನ ಮೇಲೆ ಕೇಸು, ಮಂಟಪಕ್ಕೆ ಬಂದು ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಮಾಡಿದ ವಧು! ಹುಡುಗೀನ ತರಾಟೆ ತಗೊಂಡ ಕುಟುಂಬಸ್ಥರು.....!,,

ಚಿಕ್ಕಮಗಳೂರು :ವರನ ಮೇಲೆ ಕೇಸು, ಮಂಟಪಕ್ಕೆ ಬಂದು ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಮಾಡಿದ ವಧು! ಹುಡುಗೀನ ತರಾಟೆ ತಗೊಂಡ ಕುಟುಂಬಸ್ಥರು.....!,,

ಚಿಕ್ಕಮಗಳೂರು,: ಮದುವೆ ಮಂಟಪದ ವರೆಗೂ ಬಂದ ವಧು ಕೊನೆ ಕ್ಷಣದಲ್ಲಿ ಮದುವೆಯನ್ನು ರದ್ದುಪಡಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ. ಈ ನಿರ್ಧಾರದಿಂದ ಎರಡೂ ಕುಟುಂಬಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ವರನ ಕುಟುಂಬಸ್ಥರು ಆಕೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಶೃಂಗೇರಿಯ ಈಡಿಗರ ಸಮುದಾಯ ಭವನದಲ್ಲಿ ದೀಕ್ಷಿತ್ ಮತ್ತು ಬಾಳೆಹೊನ್ನೂರು ಮೂಲದ ಯುವತಿಯ ವಿವಾಹ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಅತಿಥಿಗಳು ಆಗಮಿಸಿ, ಮದುವೆ ವಿಧಿವಿಧಾನಗಳು ಆರಂಭಗೊಳ್ಳುವ ಹೊತ್ತಿಗೆ, ವಧು ವರನ ವಿರುದ್ಧ ಪ್ರಕರಣವಿರುವುದು ಹಾಗೂ ಅವನ ವೈಯಕ್ತಿಕ ವಿಚಾರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮದುವೆಗೆ ನಿರಾಕರಿಸಿದ್ದಾಳೆ ಎನ್ನಲಾಗಿದೆ.

ಇದರಿಂದ ಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ವಧುವಿನ ಕುಟುಂಬಸ್ಥರು ಆಕೆಯನ್ನು ಮನವೊಲಿಸಲು ಯತ್ನಿಸಿದರೂ, ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article