ಮೇಘಾಲಯ :ಗಣಿ ಸ್ಫೋಟ; ಹತ್ತು‌ ಕಾರ್ಮಿಕರ ಸಾವು, ಹಲವರಿಗೆ ಗಾಯ..!!

ಮೇಘಾಲಯ :ಗಣಿ ಸ್ಫೋಟ; ಹತ್ತು‌ ಕಾರ್ಮಿಕರ ಸಾವು, ಹಲವರಿಗೆ ಗಾಯ..!!

ಶಿಲ್ಲಾಂಗ್: ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ ಮೈನ್ಸಿಂಗಟ್-ಥಾಂಗ್ಸ್ಕೊ ಪ್ರದೇಶದ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಡೈನಮೈಟ್ ಸ್ಫೋಟದಲ್ಲಿ 10 ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಲ್ಲಿದ್ದಲು ಗಣಿ ಪ್ರದೇಶದಿಂದ 10 ಮಂದಿ ಶವಗಳನ್ನು ಹೊರತೆಗೆಯಲಾಗಿದೆ.

ಸುಟ್ಟ ಗಾಯಗಳಾಗಿರುವ ಒಬ್ಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಶಿಲ್ಲಾಂಗ್‌ಗೆ ಸ್ಥಳಾಂತರಿಸಲಾಗಿದೆ ಎಂದು ಪೂರ್ವ ಜೈಂಟಿಯಾ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ಕುಮಾರ್ ತಿಳಿಸಿದ್ದಾರೆ.

ಮೇಘಾಲಯಯ ಜೈಂಟಿಯಾ ಹಿಲ್ಸ್ ನಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಆಗಮಿಸಿ, ಸ್ಪೋಟದಿಂದ ಗಾಯಗೊಂಡಿರುವಂತ ಗಾಯಾಳುಗಳನ್ನು ರಕ್ಷಿಸುವ ಕೆಲಸ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article